ಬೆಂಗಳೂರು: ಭವಿಷ್ಯದಲ್ಲಿ ಸುಸ್ಥಿರ ವಿಮಾನ ಇಂಧನದ ಪೂರೈಕೆ ವಿಚಾರವಾಗಿ ಇಂಡಿಯನ್ ಆಯಿಲ್ ಕಂಪನಿಯು ಆಕಾಸಾ ಏರ್ ಕಂಪನಿಯ ಜೊತೆ ಹೈದರಾಬಾದ್ನಲ್ಲಿ ಒಪ್ಪಂದವೊಂದಕ್ಕೆ ಸಹಿ ಹಾಕಿದೆ.

ಸುಸ್ಥಿರ ವಿಮಾನ ಇಂಧನ ಪೂರೈಕೆಯ ಮೂಲಕ ಆಕಾಸಾ ಏರ್ ಕಂಪನಿಯು ಸುಸ್ಥಿರತೆಗೆ ಸಂಬಂಧಿಸಿದಂತೆ ಹೊಂದಿರುವ ಗುರಿಗಳಿಗೆ ಇಂಡಿಯನ್ ಆಯಿಲ್ ಕಂಪನಿಯು ನೆರವು ಒದಗಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.

‘ಕಡಿಮೆ ಇಂಗಾಲದ ಇಂಧನವನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸುವ ನಮ್ಮ ಬದ್ಧತೆಯನ್ನು ಈ ಒಪ್ಪಂದವು ತೋರಿಸುತ್ತಿದೆ’ ಎಂದು ಇಂಡಿಯನ್ ಆಯಿಲ್ನ ಹಿರಿಯ ಅಧಿಕಾರಿ ಶಯಲೇಶ್ ಧರ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.