ಭಾನುವಾರ, ಜನವರಿ 26, 2020
28 °C
ಆಗ್ರೊ ಫುಡ್‌ಟೆಕ್‌ ಎಕ್ಸ್‌ಪೊ ಲಾಂಛನ ಬಿಡುಗಡೆ, ಜಾಲತಾಣಕ್ಕೆ ಮುಖ್ಯಮಂತ್ರಿ ಚಾಲನೆ

‘ಕೃಷಿ ಆಧಾರಿತ ಕ್ಲಸ್ಟರ್‌ಗೆ ರಿಯಾಯ್ತಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ನಿರ್ದಿಷ್ಟ ಪ್ರದೇಶದಲ್ಲಿ ಬೆಳೆಯುವ ಕೃಷಿ ಉತ್ಪನ್ನಗಳಿಗೆ ಅನು ಗುಣವಾಗಿ ಕೈಗಾರಿಕಾ ಕ್ಲಸ್ಟರ್‌ ಸ್ಥಾಪಿಸುವುದಕ್ಕೆ ಆಕರ್ಷಕ ಉತ್ತೇಜನಾ ಕೊಡುಗೆಗಳನ್ನು ನೀಡಲಾಗುವುದು’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ತಿಳಿಸಿದರು. 

‘ರೈತರ ವರಮಾನವನ್ನು 2022ರ ಒಳಗಾಗಿ ಎರಡು ಪಟ್ಟು ಹೆಚ್ಚಿಸಬೇಕು ಎನ್ನುವುದು ಪ್ರಧಾನಿ ನರೇಂದ್ರ ಮೋದಿ ಅವರ ಅಪೇಕ್ಷೆಯಾಗಿದೆ. ಇದಕ್ಕೆ ಪೂರಕವಾಗಿ ಕರ್ನಾಟಕ ವಾಣಿಜ್ಯೋದ್ಯಮ ಮಹಾಸಂಘವು (ಎಫ್‌ಕೆಸಿಸಿಐ) ಬೆಂಗಳೂರಿನಲ್ಲಿ 2020ರ ಏಪ್ರಿಲ್ 22-26ರವರೆಗೆ ಆಗ್ರೊ ಫುಡ್‌ಟೆಕ್ ಆಯೋಜಿಸಿರುವುದು ಶ್ಲಾಘನೀಯ' ಎಂದರು.

ಎಫ್‌ಕೆಸಿಸಿಐನ ಸರ್‌.ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಅವರು ಎಕ್ಸ್‌ಪೊದ ಲಾಂಛನ‌ ಬಿಡುಗಡೆ ಮಾಡಿ, ಜಾಲತಾಣಕ್ಕೆ ಚಾಲನೆ ನೀಡಿದರು. ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಬ್ರೋಷರ್‌ ಬಿಡುಗಡೆ ಮಾಡಿದರು.

ಎರಡು ವರ್ಷಕ್ಕೊಮ್ಮೆ ಎಕ್ಸ್‌ಪೊ: ‘2020ರ ಏಪ್ರಿಲ್‌ನ ಬಳಿಕ ಪ್ರತಿ ಎರಡು ವರ್ಷಕ್ಕೊಮ್ಮೆ ಎಕ್ಸ್‌ಪೊ ನಡೆಸಲಾಗು ವುದು. ಇಸ್ರೇಲ್, ನೆದರ್ಲೆಂಡ್ಸ್, ಆಸ್ಟ್ರೇಲಿಯಾ ಭಾಗವಹಿಸುವುದಾಗಿ ಹೇಳಿವೆ’ ಎಂದು ಎಫ್‌ಕೆಸಿಸಿಐನ ಅಧ್ಯಕ್ಷ ಸಿ.ಆರ್‌. ಜನಾರ್ಧನ್ ತಿಳಿಸಿದರು.

‘ಕೃಷಿ ಉತ್ಪನ್ನಗಳ ಸಂಸ್ಕರಣೆ ಸೇರಿದಂತೆ ವಿವಿಧ ವಿಷಯಗಳ ಮೇಲೆ ಬೆಳಕು ಹರಿಸಲಾಗುವುದು. ಯುವಜನತೆಯನ್ನು ಕೃಷಿಯೆಡೆಗೆ ಸೆಳೆಯುವುದು ಇದರ ಮೂಲ ಉದ್ದೇಶವಾಗಿದೆ’ ಎಂದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು