ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶಿ ಬೆಟ್ಟಿಂಗ್‌ ಸಂಸ್ಥೆಗಳಿಗೆ ಕಡಿವಾಣ ಹಾಕಿ: ಎಐಜಿಎಫ್‌

Published 18 ಏಪ್ರಿಲ್ 2024, 16:36 IST
Last Updated 18 ಏಪ್ರಿಲ್ 2024, 16:36 IST
ಅಕ್ಷರ ಗಾತ್ರ

ನವದೆಹಲಿ: ವಿದೇಶದಲ್ಲಿರುವ ಅನಧಿಕೃತ ಆನ್‌ಲೈನ್‌ ಜೂಜು ಮತ್ತು ಬೆಟ್ಟಿಂಗ್‌ ಸಂಸ್ಥೆಗಳು ಭಾರತೀಯ ಗ್ರಾಹಕರಿಂದ ಪ್ರತಿ ವರ್ಷ ₹1 ಲಕ್ಷ ಕೋಟಿಯಷ್ಟು ಠೇವಣಿ ಸಂಗ್ರಹಿಸುತ್ತವೆ. ಇದರಿಂದ ದೇಶಕ್ಕೆ ವಾರ್ಷಿಕ ₹20 ಸಾವಿರ ಕೋಟಿಯಷ್ಟು ಜಿಎಸ್‌ಟಿ ನಷ್ಟವಾಗುತ್ತಿದೆ ಎಂದು ಆಲ್‌ ಇಂಡಿಯಾ ಗೇಮಿಂಗ್‌ ಫೆಡರೇಷನ್‌ (ಎಐಜಿಎಫ್‌) ಹೇಳಿದೆ.

ಬಳಕೆದಾರರಿಗೆ ನೈಜ ಗೇಮಿಂಗ್‌ ಮತ್ತು ಅನಧಿಕೃತ ಗೇಮಿಂಟ್‌ ವೇದಿಕೆಗಳ ಬಗ್ಗೆ ಅರಿವು ಇರುವುದಿಲ್ಲ. ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡುತ್ತಿರುವ ಇಂತಹ ಸಂಸ್ಥೆಗಳಿಗೆ ಕಡಿವಾಣ ಹಾಕಲು ಕೇಂದ್ರವು ಮುಂದಾಗಬೇಕಿದೆ ಎಂದು ಎಐಜಿಎಫ್‌ನ ಸಿಇಒ ರೋಲ್ಯಾಂಡ್ ಲ್ಯಾಂಡರ್ಸ್ ಒತ್ತಾಯಿಸಿದ್ದಾರೆ.

ವಿದೇಶದಲ್ಲಿರುವ ಈ ಅನಧಿಕೃತ ಸಂಸ್ಥೆಗಳು ಭಾರತದಲ್ಲಿರುವ ಗೇಮಿಂಗ್‌ ವಲಯಕ್ಕೆ ಪೆಟ್ಟು ನೀಡುತ್ತಿವೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT