ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರ್‌ ಇಂಡಿಯಾ ವಿಮಾನ 22 ಗಂಟೆ ವಿಳಂಬ!

Published 2 ಜೂನ್ 2024, 16:53 IST
Last Updated 2 ಜೂನ್ 2024, 16:53 IST
ಅಕ್ಷರ ಗಾತ್ರ

ಮುಂಬೈ: ಏರ್‌ ಇಂಡಿಯಾ ಕಂಪನಿಗೆ ಸೇರಿದ ವಿಮಾನವು (ಎಐ 185) 22 ಗಂಟೆಗಳ ವಿಳಂಬದ ಬಳಿಕ ಭಾನುವಾರ ರಾತ್ರಿ 3.15ಕ್ಕೆ ದೆಹಲಿ ವಿಮಾನ ನಿಲ್ದಾಣದಿಂದ ವ್ಯಾಂಕೋವರ್‌ಗೆ ಸುರಕ್ಷಿತವಾಗಿ ತೆರಳಿದೆ ಎಂದು ಮೂಲಗಳು ತಿಳಿಸಿವೆ.

ಶನಿವಾರ ರಾತ್ರಿ 5.30ಕ್ಕೆ ಈ ವಿಮಾನವು ವ್ಯಾಂಕೋವರ್‌ಗೆ ಹಾರಾಟ ನಡೆಸಬೇಕಿತ್ತು. ಆದರೆ, ತಾಂತ್ರಿಕ ಕಾರಣಗಳಿಂದ ನಿಗದಿತ ಅವಧಿಯಲ್ಲಿ ನಿರ್ಗಮಿಸಲು ಸಾಧ್ಯವಾಗಿರಲಿಲ್ಲ ಎಂದು ಹೇಳಲಾಗಿದೆ.

ಕಳೆದ ಒಂದು ವಾರದ ಅವಧಿಯಲ್ಲಿ ಏರ್‌ ಇಂಡಿಯಾಗೆ ಸೇರಿದ ವಿಮಾನಗಳ ಹಾರಾಟದಲ್ಲಿ ವಿಳಂಬ ಎದುರಾದ ಮೂರನೇ ಪ್ರಕರಣ ಇದಾಗಿದೆ.

ಮೂರು ದಿನಗಳ ಹಿಂದೆ ದೆಹಲಿ–ಸ್ಯಾನ್‌ಫ್ರಾನ್ಸಿಸ್ಕೊ ನಡುವಿನ ಏರ್‌ ಇಂಡಿಯಾ ವಿಮಾನವು 30 ಗಂಟೆಗಳ ವಿಳಂಬದ ಬಳಿಕ ಹಾರಾಟ ನಡೆಸಿತ್ತು. ಇದರಿಂದ ತೊಂದರೆಗೆ ಸಿಲುಕಿದ್ದ ಪ್ರಯಾಣಿಕರು ಸಾಮಾಜಿಕ ಜಾಲತಾಣಗಳಲ್ಲಿ ನೋವು ತೋಡಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT