ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರ್‌ ಇಂಡಿಯಾಗೆ ಸರ್ಕಾರದ ಬಾಕಿ ₹ 1,371 ಕೋಟಿ

Last Updated 8 ಫೆಬ್ರುವರಿ 2020, 17:39 IST
ಅಕ್ಷರ ಗಾತ್ರ

ನವದೆಹಲಿ:‌ನಷ್ಟದಲ್ಲಿರುವ ಏರ್‌ ಇಂಡಿಯಾ ವಿಮಾನಯಾನ ಕಂಪನಿಗೆ ಕೇಂದ್ರ ಸರ್ಕಾರವೇ₹ 1,371 ಕೋಟಿ ಬಾಕಿ ಪಾವತಿಸಬೇಕಿದೆ.

ಮಾಹಿತಿ ಹಕ್ಕು ಕಾಯ್ದೆಯಡಿ (ಆರ್‌ಟಿಐ) ನಿವೃತ್ತ ಕಮಾಂಡರ್ ಲೋಕೇಶ್‌ ಬಾತ್ರಾ ಅವರು ಸಲ್ಲಿಸಿದ್ದ ಅರ್ಜಿಯಿಂದ ಈ ಮಾಹಿತಿ ಬಹಿರಂಗವಾಗಿದೆ.

ಒಟ್ಟಾರೆ ಬಾಕಿ ಮೊತ್ತದಲ್ಲಿ ವಿವಿಐಪಿ ಪ್ರಯಾಣಕ್ಕೆ ಆಗಿರುವ ಮೊತ್ತವೇ ₹ 845.04 ಕೋಟಿ ಇದೆ. ಇದರಲ್ಲಿ ಗೃಹ ಸಚಿವಾಲಯ ₹473.88 ಕೋಟಿ, ರಕ್ಷಣಾ ಸಚಿವಾಲಯ ₹ 261.76 ಕೋಟಿ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವಾಲಯ ₹ 109.41 ಕೋಟಿ ಬಾಕಿ ಉಳಿಸಿಕೊಂಡಿವೆ.

ವಿವಿಐಪಿಗಳಲ್ಲದೆ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳ ಪ್ರಯಾಣದ ಮೊತ್ತ ₹ 526.14 ಕೋಟಿ ಬರಬೇಕಿದೆ.

ಬಾಕಿ ಪಾವತಿಯಾಗದೇ ಇರುವುದರಿಂದ ₹ 10 ಲಕ್ಷಕ್ಕಿಂತ ಅಧಿಕ ಮೊತ್ತ ಬಾಕಿ ಉಳಿಸಿಕೊಂಡಿರುವ ಇಲಾಖೆಗಳಿಗೆ ಸಾಲ ಕೊಡುವುದನ್ನು2019ರ ಡಿಸೆಂಬರ್‌ನಿಂದ ನಿಲ್ಲಿಸಲಾಗಿದೆ ಎಂದು ಏರ್‌ ಇಂಡಿಯಾ ತಿಳಿಸಿದೆ.

2019ರ ಡಿಸೆಂಬರ್‌ 5ರ ವರೆಗಿನ ಮಾಹಿತಿಯಂತೆ ಕಂಪನಿಯ ನಿವ್ವಳ ನಷ್ಟ ₹ 8,556 ಕೋಟಿ ಇದೆ. ಒಟ್ಟಾರೆ ಸಾಲದ ಮೊತ್ತ ₹ 60 ಸಾವಿರ ಕೋಟಿಗಳಷ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT