ನವದೆಹಲಿ (ಪಿಟಿಐ): ಸಾಮರ್ಥ್ಯದ ನಿರ್ಬಂಧ ಇಲ್ಲದೆಯೇ ದೇಶೀಯ ವಿಮಾನಯಾನ ಸಂಸ್ಥೆಗಳು ಅಕ್ಟೋಬರ್ 18ರಿಂದ ಸೇವೆಯನ್ನು ಆರಂಭಿಸಬಹುದಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ದೇಶೀಯ ವಿಮಾನಗಳ ಸಂಚಾರ ಸ್ಥಿತಿಗತಿ ಮತ್ತು ಪ್ರಯಾಣಿಕರ ಬೇಡಿಕೆಯನ್ನು ಪರಿಗಣಿಸಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವು ಮಂಗಳವಾರ ಪ್ರಕಟಿಸಿದೆ.

ಅಕ್ಟೋಬರ್ 9ರಂದು ವಿವಿಧ ವಿಮಾನಯಾನ ಸಂಸ್ಥೆಗಳು 2,340 ವಿಮಾನಗಳ ಸಂಚಾರ ನಡೆಸಿದ್ದು, ಇದು ಅವುಗಳ ಒಟ್ಟು ಸಾಮರ್ಥ್ಯದ ಶೇ 71.5ರಷ್ಟಾಗಿತ್ತು.

ಪ್ರಸ್ತುತ ವಿಮಾನಯಾನ ಸಂಸ್ಥೆಗಳು ಕೋವಿಡ್ ಪೂರ್ವ ಸ್ಥಿತಿಗೆ ಹೋಲಿಸಿದರೆ ಶೇ 85ರಷ್ಟು ವಿಮಾನಗಳ ಸಂಚಾರ ಸೇವೆಯನ್ನು ನೀಡುತ್ತಿವೆ. ಸಾಮರ್ಥ್ಯ ನಿರ್ಬಂಧವು ಆ.12–ಸೆ.18ರ ನಡುವೆ ಶೇ 72.5ರಷ್ಟಿತ್ತು. ಇದು, ಜುಲೈ 5– ಆಗಸ್ಟ್ 12ರ ನಡುವೆ ಶೇ 65 ಹಾಗೂ ಜೂನ್ 1–ಜುಲೈ 5ರ ನಡುವೆ ಶೇ 50ರಷ್ಟಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.