ಶುಕ್ರವಾರ, 1 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೇಟಿಎಂನ ₹1,019 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ ಅಲಿಬಾಬ

Last Updated 12 ಜನವರಿ 2023, 11:33 IST
ಅಕ್ಷರ ಗಾತ್ರ

ನವದೆಹಲಿ: ಚೀನಾದ ಅಲಿಬಾಬಾ ಗ್ರೂಪ್, ಭಾರತದ ಡಿಜಿಟಲ್ ಪೇಮೆಂಟ್ ಸಂಸ್ಥೆ ಪೇಟಿಎಂನಲ್ಲಿ ಹೊಂದಿರುವ ಷೇರಿನಲ್ಲಿ ಶೇಕಡ 3.1ರಷ್ಟನ್ನು(ಸುಮಾರು ₹ 1,019 ಕೋಟಿ ಮೌಲ್ಯ) ಬ್ಲಾಕ್ ಡೀಲ್ ಮೂಲಕ ಮಾರಾಟ ಮಾಡಿದೆ.

ಪೇಟಿಎಂನಲ್ಲಿ ಅಲಿಬಾಬಾ ಸಂಸ್ಥೆಯು ಶೇಕಡ 6.26ರಷ್ಟು ಷೇರು ಹೊಂದಿದ್ದು, ಪ್ರತಿ ಷೇರಿಗೆ ₹536.95ನಂತೆ ಶೇಕಡಾ 3.1ರಷ್ಟನ್ನು ಮಾರಾಟ ಮಾಡಿದೆ.

ಷೇರು ಪೇಟೆಯ ಮಧ್ಯಾಹ್ನದ ವಹಿವಾಟಿನಲ್ಲಿ ಪೇಟಿಎಂ ಷೇರು ಮೌಲ್ಯ ಶೇಕಡ 8.8ರಷ್ಟು ಕುಸಿದು, ಷೇರುಗಳ ಮೌಲ್ಯ₹528ಗೆ ಬಂದಿತ್ತು. ಮಧ್ಯಾಹ್ನ 2.37ರ ಹೊತ್ತಿಗೆ ಕುಸಿತ ಶೇಕಡ 5.8ಕ್ಕೆ ನಿಂತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT