ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೇಟಿಎಂನಲ್ಲಿದ್ದ ಅಷ್ಟೂ ಷೇರು ಮಾರಾಟ ಮಾಡಿದ ಅಲಿಬಾಬಾ

Last Updated 10 ಫೆಬ್ರುವರಿ 2023, 17:29 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಚೀನಾದ ಅಲಿಬಾಬಾ ಕಂಪನಿಯು ಪೇಟಿಎಂನ ಮಾತೃಸಂಸ್ಥೆ ಒನ್‌97 ಕಮ್ಯುನಿಕೇಷನ್ಸ್‌ನಲ್ಲಿ ಉಳಿಸಿಕೊಂಡಿದ್ದ ಅಷ್ಟೂ ಷೇರುಗಳನ್ನು ಮಾರಾಟ ಮಾಡಿದೆ. ಅಲಿಬಾಬಾ ಕಂಪನಿಯು ಶುಕ್ರವಾರ ಶೇಕಡ 3.16ರಷ್ಟು ಷೇರುಗಳನ್ನು ₹ 1,360 ಕೋಟಿಗೆ ಮಾರಾಟ ಮಾಡಿದೆ. ಈ ಮೂಲಕ ಒನ್‌97 ಮ್ಯುನಿಕೇಷನ್ಸ್‌ನಿಂದ ಸಂಪೂರ್ಣವಾಗಿ ಹೊರಬಂದಿದೆ ಎಂದು ಮೂಲಗಳು ಹೇಳಿವೆ.

ಕಂಪನಿಯು 2022ರ ಡಿಸೆಂಬರ್ ಅಂತ್ಯಕ್ಕೆ ಪೇಟಿಎಂನಲ್ಲಿ ಶೇ 6.26ರಷ್ಟು ಷೇರುಗಳನ್ನು ಹೊಂದಿತ್ತು. ಈ ವರ್ಷದ ಜನವರಿಯಲ್ಲಿ ಶೇ 3.1ರಷ್ಟು ಷೇರುಗಳನ್ನು ಮಾರಾಟ ಮಾಡಿತ್ತು. ಈಗ ಶೇ 3.16ರಷ್ಟು ಷೇರುಗಳನ್ನು ಮಾರಾಟ ಮಾಡಿದೆ.

ಪ್ರತಿ ಷೇರಿಗೆ ₹645–655ರಂತೆ ಮಾರಾಟ ನಡೆದಿದೆ ಎಂದು ಗೊತ್ತಾಗಿದೆ. ಈ ಮಾರಾಟದ ಕುರಿತು ಪೇಟಿಎಂ ಮತ್ತು ಅಲಿಬಾಬಾ ಕಂಪನಿಗಳು ಪ್ರತಿಕ್ರಿಯೆ ನೀಡಿಲ್ಲ. ಆದರೆ, ಅಲಿಬಾಬಾ ಸಮೂಹದ ಆ್ಯಂಟ್‌ ಫೈನಾನ್ಶಿಯಲ್‌ ಕಂಪನಿಯು ಪೇಟಿಎಂನಲ್ಲಿ ಹೊಂದಿರುವ ಶೇ 25ರಷ್ಟು ಷೇರುಗಳನ್ನು ಮಾರಾಟ ಮಾಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT