ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲರ್ಜಿ ಚಿಕಿತ್ಸೆ: ರಕ್ತ ಪರೀಕ್ಷೆಯ ಮಹತ್ವ

Last Updated 12 ಫೆಬ್ರುವರಿ 2020, 18:14 IST
ಅಕ್ಷರ ಗಾತ್ರ

ಬೆಂಗಳೂರು: ವ್ಯಕ್ತಿಯಲ್ಲಿ ಕಂಡು ಬರುವ ವಿವಿಧ ಬಗೆಯ ಅಲರ್ಜಿ ಪತ್ತೆಹಚ್ಚಲು ಯಾತನಾಮಯ ತ್ವಛೆಯ ಪರೀಕ್ಷೆಗಿಂತ ರಕ್ತ ಪರೀಕ್ಷೆ ಹೆಚ್ಚು ಸರಳ ಮತ್ತು ಪರಿಣಾಮಕಾರಿಯಾಗಿದೆ.

‘ಈ ರಕ್ತ ಪರೀಕ್ಷೆಯು ಅಲರ್ಜಿ ಬಗ್ಗೆ ಖಚಿತ ಫಲಿತಾಂಶ ನೀಡಲಿದೆ. ಮಕ್ಕಳು ಮತ್ತು ವಯಸ್ಕರಲ್ಲಿನ ಯಾವುದೇ ಬಗೆಯ ಅಲರ್ಜಿ ಪತ್ತೆ ಹಚ್ಚಲು ರಕ್ತ ಪರೀಕ್ಷೆಯು ನೆರವಾಗಲಿದೆ. ಶಿಶುಗಳು ಮತ್ತು ಚಿಕ್ಕ ಮಕ್ಕಳಿಗೆ ಚರ್ಮದ ಹಲವಾರು ಪರೀಕ್ಷೆಗಳ ಬದಲಿಗೆ ಸುಲಭ ಮತ್ತು ಸರಳ ಸ್ವರೂಪದ ರಕ್ತ ಪರೀಕ್ಷೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ’ ಎಂದು ಡಾ. ಪ್ರಶಾಂತ್‌ ಕಿಶೋರ್‌ ಹೇಳುತ್ತಾರೆ.

ಇಮ್ಯುನೊಕ್ಯಾಪ್‌ ಲ್ಯಾಬ್‌ ಪರೀಕ್ಷೆಗಳು ವಿಶ್ವಾಸಾರ್ಹ ಫಲಿತಾಂಶ ನೀಡುತ್ತವೆ. ಇದರಿಂದ ವೈದ್ಯರು ಸುಲಭವಾಗಿ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ. ವಿವಿಧ ಬಗೆಯ ಅಲರ್ಜಿಗಳನ್ನು ಸುಲಭ ಮತ್ತು ಸಮಗ್ರ ಸ್ವರೂಪದಲ್ಲಿ ಪತ್ತೆ ಹಚ್ಚಿ ಚಿಕಿತ್ಸೆ ನೀಡಲು ನೆರವಾಗುತ್ತದೆ.

ಜೆರಥ್‌ ಪ್ಯಾಥ್‌ ಲ್ಯಾಬ್ಸ್‌ (ಜೆಪಿಎಲ್‌), ಬಯೊಚಿಪ್‌ ತಂತ್ರಜ್ಞಾನ ನೆರವಿನಿಂದ ಅಲರ್ಜಿ ಪರೀಕ್ಷೆಯಲ್ಲಿ ಹೆಚ್ಚಿನ ಪರಿಣತಿ ಸಾಧಿಸಿದೆ. ಡಾ. ಪ್ರಶಾಂತ್‌ ಕಿಶೋರ್‌ ಅವರು ಜಾಗತಿಕ ಮಟ್ಟದ ಅಲರ್ಜಿ ಪರೀಕ್ಷೆ ಸೌಲಭ್ಯಗಳನ್ನು ಭಾರತದಲ್ಲಿ ಪರಿಚಯಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT