ಗುರುವಾರ , ಅಕ್ಟೋಬರ್ 6, 2022
26 °C

ಅಮೆಜಾನ್ ಎಡವಟ್ಟು: ₹96,700 ಬೆಲೆಯ ಎಸಿ ₹5,900 ದರಕ್ಕೆ ಮಾರಾಟ!

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

DH File

ಬೆಂಗಳೂರು: ಪ್ರಮುಖ ಇ ಕಾಮರ್ಸ್ ತಾಣ ಅಮೆಜಾನ್, ದೇಶದಲ್ಲಿ ದುಬಾರಿ ಬೆಲೆಯ ಎಸಿ ಒಂದನ್ನು ಎಡವಟ್ಟಿನಿಂದಾಗಿ ಶೇ 94 ಡಿಸ್ಕೌಂಟ್ ಸಹಿತ ಆಫರ್ ದರದಲ್ಲಿ ಮಾರಾಟ ಮಾಡಿದೆ.

ಅಮೆಜಾನ್‌ನಲ್ಲಿ ಸೋಮವಾರ ತೋಷಿಬಾ ಕಂಪನಿಯ ಎಸಿ (ಮೂಲ ಬೆಲೆ ₹96,700) ಕಣ್ತಪ್ಪಿನಿಂದ ಶೇ 94 ಡಿಸ್ಕೌಂಟ್ ಸಹಿತ ಕೇವಲ ₹5,900 ಕ್ಕೆ ಲಭ್ಯವಾಗುತ್ತಿತ್ತು.

ಅಮೆಜಾನ್ ಆಫರ್ ಸೇಲ್‌ನಲ್ಲಿ ಉಂಟಾದ ಎಡವಟ್ಟಿನಿಂದ ಗ್ರಾಹಕರಿಗೆ ದುಬಾರಿ ಬೆಲೆಯ ಎಸಿ, ₹90,800 ಡಿಸ್ಕೌಂಟ್ ಬಳಿಕ ₹5,900ಕ್ಕೆ ದೊರೆತಿದೆ. ಅಲ್ಲದೆ, ₹278 ದರಕ್ಕೆ ಇಎಂಐ ಆಯ್ಕೆ ಕೂಡ ಲಭ್ಯವಾಗಿದೆ.

ಅಮೆಜಾನ್ ಕಂಪನಿಗೆ ಎಡವಟ್ಟು ಗಮನಕ್ಕೆ ಬರುತ್ತಲೇ ಅದನ್ನು ತಕ್ಷಣವೇ ಸರಿಪಡಿಸಿದೆ. ಅಲ್ಲದೆ, ಹೊಸ ದರದಲ್ಲಿ ತೋಷಿಬಾ ಎಸಿ ಈಗ ಗ್ರಾಹಕರಿಗೆ ಲಭ್ಯವಾಗುತ್ತಿದೆ.

ತೋಷಿಬಾ 1.8 ಟನ್ 5 ಸ್ಟಾರ್ ಇನ್‌ವರ್ಟರ್ ಸಹಿತ ಎಸಿ, ಮೂಲ ಬೆಲೆಯಲ್ಲಿ ಶೇ 20 ಡಿಸ್ಕೌಂಟ್ ಬಳಿಕ, ₹59,490ಕ್ಕೆ ದೊರೆಯುತ್ತಿದೆ. ಅಲ್ಲದೆ, ₹2800 ಇಎಂಐ ಆಯ್ಕೆ ಕೂಡ ಅನ್ವಯವಾಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು