ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಗ್ರಾಹಕರತ್ತ ಗಮನ: ಅಮೆಜಾನ್

29ರಿಂದ ಅಕ್ಟೋಬರ್‌ 4ರವರೆಗೆ ಆರು ದಿನಗಳ ‘ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌’
Last Updated 27 ಸೆಪ್ಟೆಂಬರ್ 2019, 19:45 IST
ಅಕ್ಷರ ಗಾತ್ರ

ಬೆಂಗಳೂರು: ‘ವಹಿವಾಟು, ಹೊಸ ಗ್ರಾಹಕರ ಪಾಲ್ಗೊಳ್ಳುವಿಕೆ ಮತ್ತು ಒಟ್ಟಾರೆ ಮಾರಾಟದ ದೃಷ್ಟಿಯಿಂದಈ ಬಾರಿಯ ‘ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌’ ಖರೀದಿ ಉತ್ಸವಗಳಲ್ಲಿಯೇ ಅತಿದೊಡ್ಡದಾಗಿರಲಿದೆ’ ಅಮೆಜಾನ್‌ ಇಂಡಿಯಾದ ಉಪಾಧ್ಯಕ್ಷ ಮನಿಶ್ ತಿವಾರಿ ಅಭಿಪ್ರಾಯಪಟ್ಟಿದ್ದಾರೆ.

‘ಹೊಸ ಗ್ರಾಹಕರನ್ನು ಸೆಳೆಯಲು ಹೆಚ್ಚಿನ ಗಮನ ನೀಡಲಾಗಿದೆ. ಎರಡು ಮತ್ತು ಮೂರನೇ ಶ್ರೇಣಿಯ ನಗರಗಳ 10 ಕೋಟಿಗೂ ಅಧಿಕ ಗ್ರಾಹಕರನ್ನು ಆನ್‌ಲೈನ್‌ ವಹಿವಾಟು ನಡೆಸುವಂತೆ ಮಾಡುವ ಯೋಜನೆಯನ್ನು ರೂಪಿಸಲಾಗಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

‘ಇದೇ 29ರಿಂದ ಅಕ್ಟೋಬರ್‌ 4ರವರೆಗೆ 6 ದಿನಗಳ ಕಾಲ ಹಬ್ಬದ ಮಾರಾಟ ನಡೆಯಲಿದೆ. ತ್ವರಿತ ಮತ್ತು ಕಾಯ್ದಿರಿಸುವ ಅವಧಿಗೆ ಉತ್ಪನ್ನಗಳ ಪೂರೈಕೆ ಮತ್ತು 30 ದಿನಗಳಲ್ಲಿ ಎಕ್ಸ್‌ಚೇಂಜ್‌ ಆಯ್ಕೆಗಳು ಇರಲಿವೆ. ಪ್ರೈಮ್‌ ಸದಸ್ಯರು ಸೆಪ್ಟೆಂಬರ್ 28ರ ಮಧ್ಯಾಹ್ನ 12 ಗಂಟೆಯಿಂದಲೇ ಖರೀದಿ ಆರಂಭಿಸಬಹುದು’ ಎಂದು ಅವರು ತಿಳಿಸಿದ್ದಾರೆ.

ಈ ಬಾರಿ ಮೊಬೈಲ್ ಮೂಲಕ ಸರಕುಗಳ ಖರೀದಿಗೆ ಬೇಡಿಕೆ ಸಲ್ಲಿಸುವವರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಗ್ರಾಹಕರು ತಮ್ಮಿಷ್ಟದ ಸರಕುಗಳನ್ನು ಖರೀದಿಸಲು ಅಗತ್ಯವಾದ ಬ್ರ್ಯಾಂಡೆಡ್‌ ಉತ್ಪನ್ನ ಮತ್ತು ಹಣಕಾಸು ಸೌಲಭ್ಯಗಳನ್ನು ಒದಗಿಸಲಾಗುವುದು’ ಎಂದು ಹೇಳಿದ್ದಾರೆ.

ಏನೆಲ್ಲಾ ಲಭ್ಯವಿರಲಿದೆ: ಒನ್‌ ಪ್ಲಸ್‌, ಸ್ಯಾಮ್ಸಂಗ್‌, ವಿವೊ ಮತ್ತಿತರ ಕಂಪನಿಗಳ 15 ಹೊಸ ಸ್ಮಾರ್ಟ್‌ಫೋನ್‌ ಗಳು,ಗೃಹೋಪಯೋಗಿ ಸಲಕರಣೆ, ಅಡುಗೆಮನೆ ಪರಿಕರ ಮತ್ತು ಟಿವಿ, ಮುಂಚೂಣಿ 200 ಬ್ರ್ಯಾಂಡ್‌ಗಳ ಎಲೆಕ್ಟ್ರಾನಿಕ್‌ ವಸ್ತುಗಳು, ಲ್ಯಾಪ್‌ಟಾಪ್‌, ಹೆಡ್‌ಫೋನ್‌, 1,200ಕ್ಕೂ ಹೆಚ್ಚು ಬ್ರ್ಯಾಂಡ್‌ಗಳ ಸಿದ್ಧ ಉಡುಪು, ಪಾದರಕ್ಷೆ, ಪೀಠೋಪಕರಣ ಮುಂತಾದ ಉತ್ಪನ್ನಗಳು ದೊರೆಯಲಿವೆ.

ತಾತ್ಕಾಲಿಕ ಉದ್ಯೋಗ ಸೃಷ್ಟಿ

ಹಬ್ಬದ ಮಾರಾಟದ ಬೇಡಿಕೆ ಈಡೇರಿಸಲು ಅಮೆಜಾನ್‌ ಕಂಪನಿಯು 90 ಸಾವಿರ ಮಂದಿಗೆ ತಾತ್ಕಾಲಿಕ ಉದ್ಯೋಗ ಕಲ್ಪಿಸಿದೆ. ಬೆಂಗಳೂರು, ಮುಂಬೈ, ಹೈದರಾಬಾದ್‌, ದೆಹಲಿ, ಚೆನ್ನೈ, ಅಹಮದಾಬಾದ್‌ ಮತ್ತು ಪುಣೆಯನ್ನೂ ಒಳಗೊಂಡು ಹಲವು ನಗರಗಳಲ್ಲಿ ಕೆಲಸ ನೀಡಲಾಗಿದೆ.

***

ಈ ಬಾರಿಯ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್, ಹಬ್ಬದ ಖರೀದಿ ಉತ್ಸವಗಳಲ್ಲಿಯೇ ಅತಿದೊಡ್ಡದಾಗಿರಲಿದೆ
-ಮನಿಷ್‌ ತಿವಾರಿ,ಅಮೆಜಾನ್‌ ಇಂಡಿಯಾ ಉಪಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT