ಭಾರತೀಯರು ಈಗ ಅಮೆಜಾನ್ ಕಾರ್ಯಾಚರಣೆಗಳನ್ನು ಮುನ್ನಡೆಸುವ ಜನರನ್ನು ಭೇಟಿ ಮಾಡಿ ಮತ್ತು ತಂತ್ರಜ್ಞಾನಗಳ ಅನುಭವ ಪಡೆದುಕೊಳ್ಳುವ ಅವಕಾಶ ಪಡೆಯಬಹುದಾಗಿದೆ.

ಅಮೆಜಾನ್ ಇಂದು ತನ್ನ ಸಾರ್ವಜನಿಕ ಪ್ರವಾಸ ಕಾರ್ಯಕ್ರಮ ಅಮೆಜಾನ್ ಟೂರ್ಸ್ ಅನ್ನು ಭಾರತಕ್ಕೆ ವಿಸ್ತರಿಸಿದೆ. ಈ ಉಪಕ್ರಮವು ಆಸಕ್ತ ಸಂದರ್ಶಕರಿಗೆ ಅಮೆಜಾನ್ನ ಅತ್ಯಾಧುನಿಕ ಫುಲ್ಫಿಲ್ಮೆಂಟ್ ಸೆಂಟರ್ಗಳ ಒಳಗೆ ಭೇಟಿ ನೀಡಲು ಆಹ್ವಾನಿಸುತ್ತಿದೆ. ಇದು ಗ್ರಾಹಕರ ಪೂರೈಕೆಗಳಿಗೆ ಶಕ್ತಿ ತುಂಬಲು ಬಳಸುವ ಅತ್ಯಾಧುನಿಕ ತಂತ್ರಜ್ಞಾನದ ಪರಿಚಯ ಮಾಡಿಕೊಳ್ಳುವ ಮತ್ತು ಅಲ್ಲಿ ಕಾರ್ಯ ನಿರ್ವಹಿಸುವ ಜನರನ್ನು ಭೇಟಿ ಮಾಡುವ ಅವಕಾಶ ಕಲ್ಪಿಸುತ್ತದೆ.

ಟೊಕಿಯೋದಲ್ಲಿ ನಡೆದ 'ಡೆಲಿವರಿಂಗ್ ದಿ ಫ್ಯೂಚರ್' ಕಾರ್ಯಕ್ರಮದಲ್ಲಿ ಈ ಪ್ರಕಟಣೆಯನ್ನು ನೀಡಲಾಗಿದೆ. ಗ್ರಾಹಕರು, ಮಾರಾಟಗಾರರು, ಉದ್ಯೋಗಿಗಳು, ಅಸೋಸಿಯೇಟ್ಗಳು ಮತ್ತು ಸಮುದಾಯಗಳಿಗೆ ಅಮೆಜಾನ್ನ ಆವಿಷ್ಕಾರಗಳನ್ನು ಪ್ರದರ್ಶಿಸಲಾಗುತ್ತದೆ.

2025ರ 4ನೇ ತ್ರೈಮಾಸಿಕದಿಂದ ಪ್ರಾರಂಭಿಸಿ ಅಮೆಜಾನ್, ದೆಹಲಿ ಎನ್.ಸಿ.ಆರ್ ಮತ್ತು ಬೆಂಗಳೂರು ನಗರದಲ್ಲಿ ಫುಲ್ಫಿಲ್ಮೆಂಟ್ ಸೆಂಟರ್ಗಳಿಗೆ ಉಚಿತ ವೈಯಕ್ತಿಕ ಪ್ರವಾಸಗಳನ್ನು ಒದಗಿಸಲಿದೆ. 45ರಿಂದ 60 ನಿಮಿಷದ ಈ ಗೈಡೆಡ್ ಟೂರ್ಗಳಲ್ಲಿ ಸಂದರ್ಶಕರು ಲಕ್ಷಾಂತರ ಉತ್ಪನ್ನಗಳನ್ನು ಸಂಗ್ರಹಿಸಿದ ಮತ್ತು ಗ್ರಾಹಕರ ಆರ್ಡರ್ಗಳನ್ನು ಸಂಸ್ಕರಿಸಿ ಪ್ರತಿನಿತ್ಯ ಗ್ರಾಹಕರ ಮನೆಬಾಗಿಲಿಗೆ ಕಳುಹಿಸುವ ಮುನ್ನ ಪ್ಯಾಕೇಜ್ ಹೇಗೆ ನಡೆಯುತ್ತದೆ ಎನ್ನುವುದನ್ನು ಕಾಣಬಹುದು.

'ನಾವು ಭಾರತದಲ್ಲಿ ಅತ್ಯಂತ ವೇಗದ, ಸುರಕ್ಷಿತ ಮತ್ತು ವಿಶ್ವಾಸಾರ್ಹ ಕಾರ್ಯಾಚರಣೆಗಳ ಜಾಲವನ್ನು ನಿರ್ಮಿಸಿದ್ದೇವೆ ಮತ್ತು ಈಗ ನಾವು ಜನರಿಗೆ ಅದರ ನೇರ ಪರಿಚಯ ಮಾಡಿಕೊಳ್ಳುವ ಅವಕಾಶ ನೀಡಲು ಉತ್ಸುಕರಾಗಿದ್ದೇವೆ' ಎಂದು ಇಂಡಿಯಾ ಮತ್ತು ಆಸ್ಟ್ರೇಲಿಯಾ ವಿಪಿ ಆಪರೇಷನ್ಸ್ ವಿ.ಪಿ ಅಭಿನವ್ ಸಿಂಗ್ ಹೇಳಿದ್ದಾರೆ.

ಈ ಟೂರ್ಗಳು ಸಂದರ್ಶಕರಿಗೆ ಹಿನ್ನೆಲೆಯ ತಂತ್ರಜ್ಞಾನ ಮತ್ತು ಪ್ರತಿನಿತ್ಯ ನಮ್ಮ ಗ್ರಾಹಕರಿಗೆ ಆರ್ಡರ್ಗಳನ್ನು ಪೂರೈಸಲು ಜನ ಒಟ್ಟಿಗೆ ಕೆಲಸ ಮಾಡುವುದನ್ನು ತೋರಿಸುತ್ತವೆ ಎಂದು ತಿಳಿಸಿದ್ದಾರೆ.

ದೆಹಲಿ ಎನ್.ಸಿ.ಆರ್ನಲ್ಲಿ ಅಮೆಜಾನ್ ಎಫ್.ಸಿ. ಉತ್ತರ ಭಾರತದಲ್ಲಿ ಅತ್ಯಂತ ದೊಡ್ಡ ಫುಲ್ಫಿಲ್ಮೆಂಟ್ ಸೆಂಟರ್ ಆಗಿದೆ. 450 ಚದರ ಅಡಿ ಇದ್ದು 8 ಫುಟ್ ಬಾಲ್ ಕ್ರೀಡಾಂಗಣಗಳಷ್ಟು ದೊಡ್ಡದಾಗಿದೆ. ಬೆಂಗಳೂರಿನಲ್ಲಿರುವ ಸೌಲಭ್ಯವು ಅಮೆಜಾನ್ನ ದೇಶದ ಅತ್ಯಂತ ದೊಡ್ಡ ಫುಲ್ಫಿಲ್ಮೆಂಟ್ ಸೆಂಟರ್ ಆಗಿದ್ದು, 2 ಮಿಲಿಯನ್ ಕ್ಯೂಬಿಕ್ ಅಡಿಯಷ್ಟು ದಾಸ್ತಾನು ಸ್ಥಳ ಹೊಂದಿದೆ. ಅದು ಸುಮಾರು 800 ಒಲಂಪಿಕ್ ಗಾತ್ರದ ಈಜುಕೊಳಗಳಷ್ಟು ಸಾಮರ್ಥ್ಯಕ್ಕೆ ಸಮಾನವಾಗಿದೆ.

ನಾವು ವಿಶ್ವದ ಹಲವು ಭಾಗಗಳಿಂದ ಸಂದರ್ಶಕರನ್ನು ಆಹ್ವಾನಿಸಿದ ನಂತರ ಅಮೆಜಾನ್ ಟೂರ್ಸ್ ಪ್ರೋಗ್ರಾಮ್ ಅನ್ನು ಭಾರತಕ್ಕೆ ತರಲು ಬಹಳ ಉತ್ಸುಕರಾಗಿದ್ದೇವೆ ಎಂದು ಅಮೆಜಾನ್ನ ಸಾರ್ವಜನಿಕ ಪ್ರವಾಸಗಳ ಕಾರ್ಯಕ್ರಮದ ನೇತೃತ್ವ ವಹಿಸಿರುವ ನಿಕ್ ಊನ್-ಲುಟ್ಝ್ ಹೇಳಿದ್ದಾರೆ.

2014ರಿಂದಲೂ ನಾವು ಅಮೆರಿಕ, ಕೆನಡಾ, ಇಂಗ್ಲೆಂಡ್, ಆಸ್ಟ್ರೇಲಿಯಾ, ಫ್ರಾನ್ಸ್, ಜರ್ಮನಿ ಮತ್ತು ಇಟಲಿಯ 35 ತಾಣಗಳಿಂದ 2 ಮಿಲಿಯನ್ ಸಂದರ್ಶಕರನ್ನು ಸ್ವಾಗತಿಸಿದ್ದೇವೆ ಎಂದಿದ್ದಾರೆ.

ಈ ಪ್ರವಾಸ ಅಮೆಜಾನ್ನ ಕಾರ್ಯಾಚರಣೆಯ ವ್ಯಾಪ್ತಿ ಮತ್ತು ಉದ್ಯೋಗಪಡೆಯ ಬದ್ಧತೆಯನ್ನು ತೋರುತ್ತದೆ. ಸಂದರ್ಶಕರು ಉಷ್ಣತೆಯ ಮೇಲ್ವಿಚಾರಣೆ, ವೈದ್ಯಕೀಯ ಸೌಲಭ್ಯಗಳು, ಏರ್-ಕಂಡೀಷನ್ಡ್ ಬ್ರೇಕ್ ರೂಂಗಳು, ಉದ್ಯೋಗಿಗಳು ಮತ್ತು ಅಸೋಸಿಯೇಟಡ್ಗಳಿಗೆ ಸುರಕ್ಷತೆಯ ಕ್ರಮಗಳನ್ನು ಕಾಣಬಹುದು. ಸುರಕ್ಷತೆಗೆ ಸಂದರ್ಶಕರು ಅನುಕೂಲಕರ ಬೆರಳು ಮುಚ್ಚಿದ ಶೂಗಳನ್ನು ಧರಿಸಬೇಕು. ಉದ್ದದ ಕೂದಲನ್ನು ಬಿಗಿಯಾಗಿ ಕಟ್ಟಿಕೊಳ್ಳಬೇಕು ಮತ್ತು ಸಡಿಲ ವಸ್ತುಗಳನ್ನು ಸುರಕ್ಷಿತವಾಗಿ ಇರಿಸಿಕೊಳ್ಳಬೇಕು.

ಪ್ರವಾಸದ ವಿವರಗಳು

ತನ್ನ ಬಾಗಿಲುಗಳನ್ನು ತೆರೆಯುವ ಮೂಲಕ ಅಮೆಜಾನ್ ಸಂದರ್ಶಕರನ್ನು ಅವರ ಖರೀದಿಯ ಅನುಭವಕ್ಕೆ ಶಕ್ತಿ ತುಂಬುವ ಪ್ರಕ್ರಿಯೆಗಳು ಮತ್ತು ತಂತ್ರಜ್ಞಾನವನ್ನು ಅರ್ಥ ಮಾಡಿಕೊಳ್ಳುವ ಅವಕಾಶ ನೀಡುತ್ತದೆ. ಅಲ್ಲದೆ ಲಾಜಿಸ್ಟಿಕ್ಸ್ ಕುರಿತಂತೆ ಆಸಕ್ತರಿಗೆ ಮೌಲ್ಯಯುತ ಮಾಹಿತಿ, ಉದ್ಯೋಗಾವಕಾಶಗಳು ಅಥವಾ ಮಾಹಿತಿಪೂರ್ಣ ದಿನ ಕಳೆಯಲು ಅವಕಾಶ ನೀಡುತ್ತದೆ. ಈ ಪ್ರವಾಸವು ..

ಸಾರ್ವಜನಿಕರಿಗೆ ಉಚಿತ ಮತ್ತು ಮುಕ್ತವಾಗಿದೆ. ಅಮೆಜಾನ್ ಟೂರ್ಸ್ 6 ವರ್ಷ ಮೇಲ್ಪಟ್ಟು ಎಲ್ಲರನ್ನೂ ಸ್ವಾಗತಿಸುತ್ತದೆ (18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಹಿರಿಯರ ಜೊತೆಯಲ್ಲಿರಬೇಕು).

ಅಮೆಜಾನ್ನ ಸುರಕ್ಷತೆಯ ರೂಢಿಗಳು, ಸುಸ್ಥಿರತೆಯ ಉಪಕ್ರಮಗಳು ಮತ್ತು ಆವಿಷ್ಕಾರ ಕುರಿತು ಒಳನೋಟಗಳನ್ನು ನೀಡುತ್ತದೆ.

ದೈನಂದಿನ ಕಾರ್ಯಾಚರಣೆಗಳ ಕುರಿತು ಪ್ರಶ್ನೆಗಳಿಗೆ ಉತ್ತರಿಸುವ ಜ್ಞಾನವುಳ್ಳ ಗೈಡ್ಗಳನ್ನು ಒಳಗೊಂಡಿರುತ್ತದೆ.

ಅಕ್ಟೋಬರ್ 25ರಿಂದ ಪ್ರಾರಂಭವಾಗುವ ಈ ಪ್ರವಾಸಗಳು ದೆಹಲಿ ಎನ್.ಸಿ.ಆರ್ ಮತ್ತು ಬೆಂಗಳೂರು ಎಫ್.ಸಿ. ಎರಡರಲ್ಲೂ ವಾರಕ್ಕೆ ಮೂರು ಬಾರಿ ಲಭ್ಯವಿದೆ. ಪ್ರತಿ ಟೂರ್ಗೆ 20 ಮಂದಿ ಭಾಗವಹಿಸಬಹುದು. ಈ ಟೂರ್ ಪಡೆಯಲು ಇಚ್ಛಿಸುವವರು ಈ ವರ್ಷದ ನಂತರದಲ್ಲಿ ಆನ್ಲೈನ್ ಮೂಲಕ ನೋಂದಣಿ ಮಾಡಬಹುದು ಮತ್ತು ಕಾರ್ಯಾಚರಣೆಗಳ ಹಿಂದಿನ ವಾಸ್ತವಾಂಶದ ಅನುಭವ ಪಡೆದುಕೊಳ್ಳಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.