ಚಂಡೀಗಢ: ಉತ್ತರಾಖಂಡ ರಾಜ್ಯದ ಹಿಮಾಲಯ ಪರ್ವತ ಶ್ರೇಣಿಯಲ್ಲಿ ಇರುವ ಗಜೋಲಿ ಎಂಬ ಕುಗ್ರಾಮಕ್ಕೆ ಸರಕು ವಿತರಣಾ ಸೇವೆ ಆರಂಭಿಸಲಾಗಿದೆ ಎಂದು ಅಮೆಜಾನ್ ಕಂಪನಿ ತಿಳಿಸಿದೆ.

‘ಈ ಗ್ರಾಮವು 4,500 ಅಡಿ ಎತ್ತರದಲ್ಲಿದೆ. ಇಲ್ಲಿನ ಮಹರ್ಷಿ ಆಶ್ರಮಕ್ಕೆ ಸೇವೆ ಆರಂಭಿಸಿದ ಮೊದಲ ಇ–ಕಾಮರ್ಸ್ ಕಂಪನಿ ಎಂಬ ಹೆಗ್ಗಳಿಕೆ ನಮ್ಮದಾಗಿದೆ’ ಎಂದು ತಿಳಿಸಿದೆ.

ಆಶ್ರಮದ ಸುತ್ತಮುತ್ತ ಯಾವುದೇ ಅಂಗಡಿಗಳಿಲ್ಲ. ಈ ಸ್ಥಳಕ್ಕೆ ಸರಕುಗಳನ್ನು ಕಷ್ಟಕರ. ಜೊತೆಗೆ ಸಾಕಷ್ಟು ಸಮಯವೂ ಹಿಡಿಯುತ್ತದೆೆ ಎಂದು ತಿಳಿಸಿದೆ.

‘ದೇಶದ ದುರ್ಗಮ ಸ್ಥಳಗಳಲ್ಲಿರುವ ಗ್ರಾಹಕರಿಗೂ ಸೇವೆ ಒದಗಿಸಲು ಕಂಪನಿಯು ಒತ್ತು ನೀಡುತ್ತಿದೆ. ಇದಕ್ಕೆ ಪೂರಕವಾಗಿ ಮೂಲ ಸೌಕರ್ಯವನ್ನೂ ಅಭಿವೃದ್ಧಿಪಡಿಸಲಾಗಿದೆ’ ಎಂದು ಅಮೆಜಾನ್ ಸರಕು ಸೇವಾ ವಿಭಾಗದ ನಿರ್ದೇಶಕರಾದ ಕರುಣಾ ಶಂಕರ ಪಾಂಡೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.