ಮುಂಬೈ: ಉದ್ಯಮಿ ಮುಕೇಶ್ ಅಂಬಾನಿ ಕುಟುಂಬದ ಒಡೆತನದಲ್ಲಿ ಇರುವ ಸಂಪತ್ತಿನ ಮೌಲ್ಯವು ₹28 ಲಕ್ಷ ಕೋಟಿಯಷ್ಟಿದೆ ಎಂದು ಹುರೂನ್ ಸಂಸ್ಥೆಯು ಬಾಕ್ಲೇಸ್ ಜೊತೆಗೂಡಿ ಸಿದ್ಧಪಡಿಸಿದ ವರದಿಯೊಂದು ಹೇಳಿದೆ.

ಅಂಬಾನಿ ಕುಟುಂಬದ ಸಂಪತ್ತಿನ ಮೌಲ್ಯವು ಗೌತಮ್ ಅದಾನಿ ಕುಟುಂಬದ ಆಸ್ತಿಯ ಮೌಲ್ಯಕ್ಕೆ (₹14.01 ಲಕ್ಷ ಕೋಟಿ) ಹೋಲಿಸಿದರೆ ಎರಡು ಪಟ್ಟು ಹೆಚ್ಚು.

ಭಾರತದ 300 ಅತ್ಯಂತ ಶ್ರೀಮಂತ ಕುಟುಂಬಗಳ ಸಂಪತ್ತಿನ ಮೌಲ್ಯವು ₹140 ಲಕ್ಷ ಕೋಟಿಗಿಂತ ಹೆಚ್ಚು ಎಂದು ವರದಿಯು ಹೇಳಿದೆ. ಇದು ದೇಶದ ಒಟ್ಟು ಆಂತರಿಕ ಉತ್ಪಾದನೆಯ (ಜಿಡಿಪಿ) ಶೇ 40ರಷ್ಟು. ಅಂಬಾನಿ ಕುಟುಂಬದ ಸಂಪತ್ತಿನ ಮೌಲ್ಯವೇ ದೇಶದ ಜಿಡಿಪಿಯ ಶೇ 12ರಷ್ಟು ಆಗುತ್ತದೆ!

ದೇಶದ 300 ಅತ್ಯಂತ ಶ್ರೀಮಂತ ಕುಟುಂಬಗಳು ಕಳೆದ ವರ್ಷದಲ್ಲಿ ಪ್ರತಿದಿನ ₹7,100 ಕೋಟಿಯಷ್ಟು ಸಂಪತ್ತು ಸೃಷ್ಟಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.