ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಂಘಿ ಇಂಡಸ್ಟ್ರೀಸ್’ ಖರೀದಿಸಿದ ಅಂಬುಜಾ ಸಿಮೆಂಟ್ಸ್

Published 3 ಆಗಸ್ಟ್ 2023, 15:22 IST
Last Updated 3 ಆಗಸ್ಟ್ 2023, 15:22 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಗೌತಮ್ ಅದಾನಿ ಮಾಲೀಕತ್ವದ ಅಂಬುಜಾ ಸಿಮೆಂಟ್ಸ್‌, ಸಂಘಿ ಇಂಡಸ್ಟ್ರೀಸ್‌ನ ಬಹುಪಾಲು ಷೇರುಗಳನ್ನು ₹5,000 ಕೋಟಿಗೆ ಖರೀದಿಸಿದೆ. ಅದಾನಿ ಸಮೂಹದ ವಿರುದ್ಧ ಹಿಂಡನ್‌ಬರ್ಗ್‌ ರಿಸರ್ಚ್‌ ಕೆಲವು ಆರೋಪಗಳನ್ನು ಹೊರಿಸಿದ ನಂತರದಲ್ಲಿ, ಅದಾನಿ ಸಮೂಹದ ಪ್ರಮುಖ ಸ್ವಾಧೀನ ಪ್ರಕ್ರಿಯೆ ಇದಾಗಿದೆ.

ಈ ಖರೀದಿಯ ನಂತರದಲ್ಲಿ ಸಂಘಿ ಇಂಡಸ್ಟ್ರೀಸ್‌ ಲಿಮಿಟೆಡ್‌ನಲ್ಲಿ ಅಂಬುಜಾ ಸಿಮೆಂಟ್ಸ್‌ನ ಪಾಲು ಶೇ 56.74 ಆಗಲಿದೆ. ಇದಲ್ಲದೆ, ಸಂಘಿ ಇಂಡಸ್ಟ್ರೀಸ್‌ನ ಷೇರುದಾರರಿಂದ ಒಟ್ಟು 6.71 ಕೋಟಿ ಷೇರುಗಳ ಖರೀದಿಗೆ ಅಂಬುಜಾ ಸಿಮೆಂಟ್ಸ್‌ ಮುಂದಾಗಲಿದೆ. ಈ ಷೇರುಗಳನ್ನು ಮುಕ್ತ ಮಾರುಕಟ್ಟೆಯಿಂದ ಖರೀದಿಸಲಿದೆ. ಸಂಘಿ ಇಂಡಸ್ಟ್ರೀಸ್‌ ಲಿಮಿಟೆಡ್‌ ಸಿಮೆಂಟ್‌ ತಯಾರಿಕೆಯಲ್ಲಿ ತೊಡಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT