ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತಂಕ ಬೇಡ: ಮ್ಯೂಚುವಲ್ ಫಂಡ್ ‌ಹೂಡಿಕೆದಾರರಿಗೆ ಭರವಸೆ

Last Updated 24 ಏಪ್ರಿಲ್ 2020, 15:01 IST
ಅಕ್ಷರ ಗಾತ್ರ

ನವದೆಹಲಿ: ಸ್ಥಿರ ಆದಾಯದ ಬಹುತೇಕ ಮ್ಯೂಚುವಲ್‌ ಫಂಡ್ಸ್‌ಗಳು, ಹಣ ಮರುಪಾವತಿಯ ಗರಿಷ್ಠ ಸಾಮರ್ಥ್ಯ ಹೊಂದಿರುವ ಸಾಲಪತ್ರಗಳಲ್ಲಿ ಹಣ ತೊಡಗಿಸಿವೆ ಮತ್ತು ಇಂತಹ ಸ್ಕೀಮ್‌ಗಳಲ್ಲಿ ಸಾಕಷ್ಟು ನಗದು ಲಭ್ಯತೆ ಇದೆ ಎಂದು ಭಾರತದ ಮ್ಯೂಚುವಲ್‌ ಫಂಡ್ಸ್‌ ಸಂಘವು (ಎಎಂಎಫ್‌ಐ) ಹೂಡಿಕೆದಾರರಿಗೆ ಭರವಸೆ ನೀಡಿದೆ.

‘ಬ್ಯಾಂಕ್‌ಗಳ ಬಳಿ ಹೆಚ್ಚುವರಿಯಾಗಿ ಇರುವ ₹ 7 ಲಕ್ಷ ಕೋಟಿ ಮೊತ್ತದ ನಗದು, ಕಡಿಮೆ ಬಡ್ಡಿ ದರಕ್ಕೆ ಬ್ಯಾಂಕ್‌ಗಳಿಗೆ ದೀರ್ಘಾವಧಿ ಸಾಲ ನೀಡುವ ಆರ್‌ಬಿಐ ನಿರ್ಧಾರ ಮತ್ತು ಇನ್ನಷ್ಟು ಬಡ್ಡಿ ದರ ಕಡಿತದ ನಿರೀಕ್ಷೆಯಿಂದ ಬಾಂಡ್‌ ಮಾರುಕಟ್ಟೆಯಲ್ಲಿ ನಗದುತನ ಕಂಡು ಬರಲಿದೆ. ಸದ್ಯದ ಸವಾಲಿನ ಸಂದರ್ಭದಲ್ಲಿ ಮ್ಯೂಚುವಲ್‌ ಫಂಡ್‌ ವಹಿವಾಟು ಸಹಜಸ್ಥಿತಿಯಲ್ಲಿ ಇರಲಿದೆ. ಹೂಡಿಕೆದಾರರ ಹಿತರಕ್ಷಿಸಲು ಉದ್ದಿಮೆಯು ಬದ್ಧವಾಗಿದೆ. ಆತಂಕಕ್ಕೆ ಒಳಗಾಗಿ ಹೂಡಿಕೆ ಮರಳಿಸಿ ಹಣ ಹಿಂದೆ ಪಡೆಯುವ ಅಗತ್ಯ ಇಲ್ಲ‘ ಎಂದು ‘ಎಂಎಂಎಫ್‌ಐ’ ಅಧ್ಯಕ್ಷ ನಿಲೇಶ್‌ ಶಾ ಹೇಳಿದ್ದಾರೆ.

ಒಂದು ನಿಧಿ ನಿರ್ವಹಣಾ ಸಂಸ್ಥೆಯಲ್ಲಿನ ವಿದ್ಯಮಾನದಿಂದ ಪ್ರಭಾವಿತರಾಗಿ ಹೂಡಿಕೆದಾರರು ಮ್ಯೂಚುವಲ್‌ ಫಂಡ್‌ ಹೂಡಿಕೆಯಿಂದ ವಿಮುಖರಾಗಬಾರದು. ತಮ್ಮ ಹೂಡಿಕೆ ಗುರಿ ಎಡೆಗೆ ಗಮನ ಹರಿಸಬೇಕು, ಹಣಕಾಸು ಸಲಹೆಗಾರರನ್ನು ಸಂರ್ಪಕಿಸಬೇಕು ಎಂದು ಸಲಹೆ ನೀಡಿರುವ ‘ಎಎಂಎಫ್‌ಐ’ ಹೂಡಿಕೆದಾರರ ಆತಂಕ ದೂರ ಮಾಡುವ ಪ್ರಯತ್ನ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT