ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಜಯಪುರ: 300 ಮೆಗಾವಾಟ್ ಪವನ ವಿದ್ಯುತ್‌ ಉತ್ಪಾದನೆ

Published 27 ಡಿಸೆಂಬರ್ 2023, 15:22 IST
Last Updated 27 ಡಿಸೆಂಬರ್ 2023, 15:22 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಅಸ್ಕಿ ಗ್ರಾಮದಲ್ಲಿ 300 ಮೆಗಾವಾಟ್‌ ಸಾಮರ್ಥ್ಯದ ಪವನ ವಿದ್ಯುತ್‌ ಉತ್ಪಾದನಾ ಘಟಕ ಸ್ಥಾಪಿಸುವುದಾಗಿ ಅಪ್ರವ ಎನರ್ಜಿ ಕಂಪನಿ ತಿಳಿಸಿದೆ.

ಭಾರತೀಯ ಸೌರ ಶಕ್ತಿ ನಿಗಮದ (ಎಸ್‌ಇಸಿಐ) ಆಧಾರಿತ ಅಂತರರಾಜ್ಯಗಳ ಪ್ರಸರಣ ವ್ಯವಸ್ಥೆಯಡಿ (ಐಎಸ್‌ಟಿಎಸ್‌) ಮಾಡಿಕೊಂಡಿರುವ ಒಪ್ಪಂದ ಅನ್ವಯ ಈ ಘಟಕ ಸ್ಥಾಪನೆಯಾಗುತ್ತಿದೆ ಎಂದು ತಿಳಿಸಿದೆ.

ನಿಗಮದ ಜೊತೆಗಿನ ವಿದ್ಯುತ್‌ ಖರೀದಿ ಒಪ್ಪಂದದ ಅನ್ವಯ ನಿಗದಿಪಡಿಸಿರುವ ಕಾಲಮಿತಿಯಲ್ಲಿ ಈ ಯೋಜನೆಯನ್ನು ಪೂರ್ಣಗೊಳಿಸಲಾಗುವುದು ಎಂದು ಹೇಳಿದೆ.

ಒಪ್ಪಂದದ ಪ್ರಕಾರ ಯೋಜನೆಗೆ ಅಗತ್ಯವಿರುವ ಭೂಸ್ವಾಧೀನ, ಪವನ ಉತ್ಪಾದನಾ ಘಟಕ ನಿರ್ಮಾಣ ಸೇರಿದಂತೆ ಇಂಧನ ಸಚಿವಾಲಯ ಸೂಚಿಸಿರುವ ಅಂತರರಾಜ್ಯ ಪ್ರಸರಣ ವ್ಯವಸ್ಥೆಯವರೆಗೆ ವಿದ್ಯುತ್ ಸರಬರಾಜು ಗ್ರಿಡ್‌ಗಳನ್ನು ನಿರ್ಮಿಸುವುದು ಕಂಪನಿಯ ಹೊಣೆಯಾಗಿದೆ.

‘ಕರ್ನಾಟಕದಲ್ಲಿ ಇದು ಕಂಪನಿಯ ಮೂರನೇ ಪವನ ವಿದ್ಯುತ್‌ ಘಟಕವಾಗಿದೆ’ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ರಾಜೀವ್‌ ರಂಜನ್‌ ಮಿಶ್ರಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT