ಗುರುವಾರ , ಫೆಬ್ರವರಿ 25, 2021
28 °C

₹7 ಸಾವಿರ ತಲುಪಿದ ಹಸಿ ಅಡಿಕೆ ದರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ನಗರದಲ್ಲಿ ಹಸಿ ಅಡಿಕೆ ದರ ಶನಿವಾರ ಸಂಜೆ ಪ್ರತಿ ಕ್ವಿಂಟಲ್‍ಗೆ ₹7 ಸಾವಿರ ದರ ತಲುಪಿದೆ. ಟಿಎಸ್ಎಸ್ ಆವಾರದಲ್ಲಿ ನಡೆಯುತ್ತಿರುವ ಟೆಂಡರ್ ಪ್ರಕ್ರಿಯೆಯಲ್ಲಿ ಈ ಮೊತ್ತ ದಾಖಲಾಯಿತು.

ಮೊದಲ ಬಾರಿಗೆ ದಿನಕ್ಕೆ ಎರಡು ಬಾರಿ ಟೆಂಡರ್ ಪ್ರಕ್ರಿಯೆಯನ್ನು ಟಿಎಸ್ಎಸ್ ಸಂಸ್ಥೆ ನಡೆಸಿತು. ಸಂಜೆ ಟೆಂಡರ್‌ನಲ್ಲಿ ಹಸಿ ಅಡಿಕೆ ₹7,001 ದರದಲ್ಲಿ ಮಾರಾಟಗೊಂಡಿದೆ. ಸುಮಾರು 3 ಕ್ವಿಂಟಲ್‍ನಷ್ಟು ಅಡಿಕೆಗೆ ಈ ದರ ಲಭಿಸಿತು. ಎರಡನೇ ಅವಧಿಯ ಟೆಂಡರ್‌ನಲ್ಲಿ 100 ಕ್ವಿಂಟಲ್‍ಗೂ ಹೆಚ್ಚು ತೂಕದ ಅಡಿಕೆ ಮಾರಾಟಗೊಂಡಿತು ಎಂದು ಪ್ರತಿನಿಧಿಯೊಬ್ಬರು ಹೇಳಿದರು. ನ.5ರಿಂದ ಶಿರಸಿ ಮಾರುಕಟ್ಟೆಯಲ್ಲಿ ಟೆಂಡರ್ ಮೂಲಕ ಅಡಿಕೆ ಖರೀದಿ ಸುವ ಪ್ರಕ್ರಿಯೆ ನಡೆಯುತ್ತಿದೆ. ಈ ಬಾರಿ ಶೇ 60ಕ್ಕಿಂತ ಹೆಚ್ಚು ಹಸಿ ಅಡಿಕೆ ಫಸಲನ್ನೇ ರೈತರು ಮಾರಾಟ ನಡೆಸಿರಬಹುದು ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ. ಜನವರಿ ಆರಂಭದಿಂದ ಸರಾಸರಿ ₹6,000ರಿಂದ ₹6,500 ದರಕ್ಕೆ ಅಡಿಕೆ ಮಾರಾಟವಾಗುತ್ತಿದೆ. ದರ ಹೆಚ್ಚಿರುವುದು ಆಶಾಭಾವ ಮೂಡಿದೆ ಎಂದು ಅಡಿಕೆ ತಂದ ರೈತ ಅನಂತ ನಾಯ್ಕ ಪ್ರತಿಕ್ರಿಯಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು