ಆಸಿಯಾನ್‌ ಸಮ್ಮೇಳನಕ್ಕೆ ಭರದ ಸಿದ್ಧತೆ

7

ಆಸಿಯಾನ್‌ ಸಮ್ಮೇಳನಕ್ಕೆ ಭರದ ಸಿದ್ಧತೆ

Published:
Updated:
Prajavani

ಬೆಂಗಳೂರು: ಕರ್ನಾಟಕ ವಾಣಿಜ್ಯೋದ್ಯಮ ಮಹಾಸಂಘವು (ಎಫ್‌ಕೆಸಿಸಿಐ) ಸಂಘಟಿಸಲಿರುವ ಆಸಿಯಾನ್‌ ವಾಣಿಜ್ಯೋದ್ಯಮ ಸಮ್ಮೇಳನದಲ್ಲಿ ವಿವಿಧ ದೇಶಗಳ 120 ವಾಣಿಜ್ಯ ನಿಯೋಗಗಳು ಭಾಗವಹಿಸಲಿವೆ.

‘ಇದೇ 25ರಿಂದ ಮೂರು ದಿನಗಳವರೆಗೆ ನಡೆಯಲಿರುವ ಸಮ್ಮೇಳನದಲ್ಲಿ ಮಲೇಷ್ಯಾ, ಸಿಂಗಪುರ, ಫಿಲಿಪ್ಪೀನ್ಸ್‌, ಥಾಯ್ಲೆಂಡ್‌, ವಿಯೆಟ್ನಾಂ, ಜಪಾನ್‌, ಚೀನಾ, ಯುಎಇ, ಒಮಾನ್‌ ಮತ್ತು ಶ್ರೀಲಂಕಾದ ನಿಯೋಗಗಳು ಭಾಗವಹಿಸುವುದನ್ನು ಖಚಿತಪಡಿಸಿವೆ. 2 ಸಾವಿರ ಪ್ರತಿನಿಧಿಗಳು, 125 ಉಪನ್ಯಾಸಕರು, 1500 ಸಂಘಟನೆಗಳು ಮತ್ತು 120 ಪ್ರದರ್ಶಕರು ಭಾಗವಹಿಸಲಿದ್ದಾರೆ’ ಎಂದು ‘ಎಫ್‌ಕೆಸಿಸಿಐ’ ಅಧ್ಯಕ್ಷ ಸುಧಾಕರ ಎಸ್‌. ಶೆಟ್ಟಿ ತಿಳಿಸಿದ್ದಾರೆ.

ಸಮ್ಮೇಳನದ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದರು. ‘ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಕೇಂದ್ರ ಸಚಿವರಾದ ನಿತೀನ್‌ ಗಡ್ಕರಿ, ಸುರೇಶ್‌ ಪ್ರಭು, ನಿರ್ಮಲಾ ಸೀತಾರಾಮನ್‌ ಭಾಗವಹಿಸಲಿದ್ದಾರೆ. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !