ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಟಲ್ ಪಿಂಚಣಿ ಯೋಜನೆ ಎಲ್ಲರನ್ನೂ ತಲುಪಲಿ: ಹರದೀಪ್ ಸಿಂಗ್ ಅಹ್ಲುವಾಲಿಯಾ

Published 28 ಜುಲೈ 2023, 16:37 IST
Last Updated 28 ಜುಲೈ 2023, 16:37 IST
ಅಕ್ಷರ ಗಾತ್ರ

ಬೆಂಗಳೂರು: ಅಟಲ್ ಪಿಂಚಣಿ ಯೋಜನೆ (ಎಪಿವೈ) ರಾಜ್ಯದ ಮೂಲೆ ಮೂಲೆಯನ್ನೂ ತಲುಪುವಂತೆ ಆಗಬೇಕು ಎಂದು ಕೆನರಾ ಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕ ಹರದೀಪ್ ಸಿಂಗ್ ಅಹ್ಲುವಾಲಿಯಾ ಹೇಳಿದರು.

2022–23ನೆಯ ಹಣಕಾಸು ವರ್ಷದಲ್ಲಿ ಎಪಿವೈ ಯೋಜನೆಯ ಅಡಿಯಲ್ಲಿ 7 ಲಕ್ಷ ಜನರನ್ನು ನೋಂದಾಯಿಸುವ ಗುರಿ ಹೊಂದಲಾಗಿತ್ತು. ಆದರೆ 5.92 ಲಕ್ಷ ನೋಂದಣಿ ಮಾತ್ರ ಆಗಿದೆ ಎಂದು ಅಹ್ಲುವಾಲಿಯಾ ವಿವರಿಸಿದರು.

ಎಪಿವೈ ಹೆಚ್ಚಿನ ಜನರಿಗೆ ತಲುಪುವಂತೆ ಆಗಬೇಕು ಎಂಬ ಉದ್ದೇಶದಿಂದ ರಾಜ್ಯ ಮಟ್ಟದ ಬ್ಯಾಂಕರ್‌ಗಳ ಸಮಿತಿಯು, ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ (ಪಿಎಫ್‌ಆರ್‌ಡಿಎ) ಜೊತೆಗೂಡಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಸಂಘಟಿತ ವಲಯದವರನ್ನು ಗುರಿಯಾಗಿಸಿಕೊಂಡು ರೂಪಿಸಿರುವ ‘ಎಪಿವೈ’ಗೆ 18 ವರ್ಷಕ್ಕಿಂತ ಹೆಚ್ಚು ವಯಸ್ಸಾಗಿರುವ, 40 ವರ್ಷದೊಳಗಿನ ಯಾರು ಕೂಡ ಸೇರಬಹುದು. 60 ವರ್ಷ ವಯಸ್ಸು ತುಂಬಿದ ನಂತರದಲ್ಲಿ, ನಿಶ್ಚಿತ ಮೊತ್ತ ಪಿಂಚಣಿ ರೂಪದಲ್ಲಿ ಸಿಗುತ್ತದೆ. ರಾಜ್ಯದಲ್ಲಿ ಇದುವರೆಗೆ ಒಟ್ಟು 30.66 ಲಕ್ಷ ಮಂದಿ ಎಪಿವೈ ವ್ಯಾಪ್ತಿಗೆ ಬಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT