ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಬ್ಸಿಡಿ ಎಲ್‌ಪಿಜಿ ದರ ₹ 3 ಇಳಿಕೆ

Last Updated 1 ಜುಲೈ 2019, 20:00 IST
ಅಕ್ಷರ ಗಾತ್ರ

ನವದೆಹಲಿ: ಸಬ್ಸಿಡಿ ಸಹಿತ ಅಡುಗೆ ಅನಿಲ (ಎಲ್‌ಪಿಜಿ) ಪ್ರತಿ ಸಿಲಿಂಡರ್‌ ದರ ₹ 3.02ರಂತೆ ಕಡಿಮೆ ಮಾಡಲಾಗಿದೆ. ಇದರಿಂದ 14.2 ಕೆ.ಜಿಯ ಸಿಲಿಂಡರ್‌ ದರ ₹ 492.04ಕ್ಕೆ ಇಳಿಕೆಯಾಗಿದೆ.

ಅಂತರರಾಷ್ಟ್ರೀಯ ತೈಲ ದರಕ್ಕೆ ಅನುಗುಣವಾಗಿ ಪರಿಷ್ಕರಣೆ ಮಾಡಲಾಗಿದೆ ಎಂದು ಕಂಪನಿಗಳು ತಿಳಿಸಿವೆ.

ಬೆಂಗಳೂರಿನಲ್ಲಿ ಎಚ್‌ಪಿ ಸಿಲಿಂಡರ್‌ ದರ ₹ 739 ಇತ್ತು. ಅದು ₹ 735.98ಕ್ಕೆ ಇಳಿಕೆಯಾಗಿದೆ.ಮಾರ್ಚ್‌ವರೆಗೂ ಸತತ ನಾಲ್ಕು ತಿಂಗಳವರೆಗೆ ಪ್ರತಿ ಸಿಲಿಂಡರ್‌ಗೆ ₹ 3.84 ಏರಿಕೆ ಮಾಡಲಾಗಿತ್ತು.

ಸೀಮೆ ಎಣ್ಣೆ: ಪಡಿತರ ವ್ಯವಸ್ಥೆ ಮೂಲಕ ವಿತರಿಸುವ ಸೀಮೆಎಣ್ಣೆ ದರ ಲೀಟರಿಗೆ 25 ಪೈಸೆ ಹೆಚ್ಚಾಗಿದ್ದು, ಮುಂಬೈನಲ್ಲಿ ಲೀಟರ್‌ಗೆ ₹ 15.25ಕ್ಕೆ ತಲುಪಿದೆ. ಆದರೆ,ಮುಕ್ತ ಮಾರುಕಟ್ಟೆಯ ದರ ₹ 2.01ರಂತೆ ಕಡಿಮೆಯಾಗಿ ₹ 63.93 ರಿಂದ ₹ 61.92ಕ್ಕೆ ಇಳಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT