ಮಂಗಳವಾರ, ಫೆಬ್ರವರಿ 18, 2020
21 °C
1 ಲಕ್ಷ ಹಂಗಾಮಿ ಕೆಲಸಗಾರರ ಉದ್ಯೋಗಕ್ಕೆ ಕುತ್ತು

ವಾಹನ ಬಿಡಿಭಾಗ ಕೈಗಾರಿಕೆ ವಹಿವಾಟು ಶೇ 10ರಷ್ಟು ಕುಸಿತ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ವಾಹನ ಬಿಡಿಭಾಗಗಳನ್ನು ತಯಾರಿಸುವ ಉದ್ದಿಮೆಗಳ ವಹಿವಾಟು ಈ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಶೇ 10ರಷ್ಟು ಕುಸಿತ ದಾಖಲಿಸಿದೆ.

ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗಿನ ಅವಧಿಯಲ್ಲಿ ಈ ಉದ್ದಿಮೆಯ ವಹಿವಾಟು ₹1.79 ಲಕ್ಷ ಕೋಟಿಗಳಷ್ಟು ಕಡಿಮೆಯಾಗಿದೆ. ವರ್ಷದ ಹಿಂದಿನ ₹1.99 ಲಕ್ಷ ಕೋಟಿಗೆ ಹೋಲಿಸಿದರೆ ಶೇ 10.1ರಷ್ಟು ಕಡಿಮೆಯಾಗಿದೆ.

ಇದರಿಂದ ಜುಲೈವರೆಗಿನ ಅವಧಿಯಲ್ಲಿ ಒಂದು ಲಕ್ಷದಷ್ಟು ಹಂಗಾಮಿ ಕೆಲಸಗಾರರು ಉದ್ಯೋಗಕ್ಕೆ ಎರವಾಗಿದ್ದಾರೆ.

ವಹಿವಾಟು ಕುಸಿತದಿಂದಾಗಿ ₹1,400 ಕೋಟಿ ಮೊತ್ತದ ಬಂಡವಾಳ ಹೂಡಿಕೆಯ ನಷ್ಟವೂ ಉಂಟಾಗಿದೆ.

‘ವಾಹನ ತಯಾರಿಕೆ ಉದ್ದಿಮೆಯು ದೀರ್ಘ ಸಮಯದಿಂದ ಮಾರಾಟ ಕುಸಿತದ ಬಿಕ್ಕಟ್ಟು ಎದುರಿಸುತ್ತಿದೆ. ಒಂದು ವರ್ಷದಿಂದ ಎಲ್ಲ ಬಗೆಯ ವಾಹನಗಳ ಮಾರಾಟ ಕುಸಿತ ಕಾಣುತ್ತಿದೆ’ ಎಂದು ವಾಹನ ಬಿಡಿಭಾಗ ತಯಾರಿಕಾ ಸಂಘದ (ಎಸಿಎಂಎ) ಅಧ್ಯಕ್ಷ ದೀಪಕ್‌ ಜೈನ್‌ ಹೇಳಿದ್ದಾರೆ.

‘ಸದ್ಯಕ್ಕೆ ವಾಹನ ತಯಾರಿಕೆಯು ಶೇ 15 ರಿಂದ ಶೇ 20ರಷ್ಟು ಕಡಿಮೆಯಾಗಿದೆ. ಇದು ಬಿಡಿಭಾಗ ತಯಾರಿಕೆ ಕೈಗಾರಿಕೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಹಿಂದಿನ ವರ್ಷದ ಅಕ್ಟೋಬರ್‌ನಿಂದಲೇ ಉದ್ಯೋಗ ನಷ್ಟ ಕಂಡು ಬರುತ್ತಿದೆ. ಹಂಗಾಮಿ ನೌಕರರು ಕೆಲಸಕ್ಕೆ ಎರವಾಗುತ್ತಿದ್ದಾರೆ’ ಎಂದು ಹೇಳಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)