ಶನಿವಾರ, ಸೆಪ್ಟೆಂಬರ್ 25, 2021
29 °C

ಮಾರುತಿ ಸುಜುಕಿ ಮಾಜಿ ಎಂ.ಡಿ. ಜಗದೀಶ ಖಟ್ಟರ್ ನಿಧನ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಮಾರುತಿ ಸುಜುಕಿ ಇಂಡಿಯಾದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಜಗದೀಶ ಖಟ್ಟರ್ (79) ಅವರು ಹೃದಯಾಘಾತದಿಂದ ಸೋಮವಾರ ನಿಧನರಾದರು ಎಂದು ಅವರ ನಿಕಟವರ್ತಿಗಳು ತಿಳಿಸಿದ್ದಾರೆ.

2002ರಲ್ಲಿ ಸರ್ಕಾರವು ಕಂಪನಿಯಲ್ಲಿ ತಾನು ಹೊಂದಿದ್ದ ಷೇರುಗಳನ್ನು ಮಾರಾಟ ಮಾಡಲು ಆರಂಭಿಸಿದ ನಂತರ ‘ಮಾರುತಿ’ಯ ಬೆಳವಣಿಗೆಗೆ ಅಡಿಪಾಯ ಹಾಕಿದವರಲ್ಲಿ ಒಬ್ಬರೆಂದು ಕಟ್ಟರ್ ಅವರನ್ನು ಪರಿಗಣಿಸಲಾಗಿದೆ.

ಅವರು 1993ರ ಜುಲೈನಲ್ಲಿ ಮಾರುಕಟ್ಟೆ ವಿಭಾಗದ ನಿರ್ದೇಶಕರಾಗಿ ಮಾರುತಿ ಉದ್ಯೋಗ್ ಲಿಮಿಟೆಡ್‌ ಸೇರಿದರು. ಬಳಿಕ ಆರು ವರ್ಷಗಳಲ್ಲಿ ಮಾರುಕಟ್ಟೆ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಹುದ್ದೆಗೆ ಏರಿದರು. 1999ರಲ್ಲಿ ಜಂಟಿ ವ್ಯವಸ್ಥಾಪಕ ನಿರ್ದೇಶಕರಾಗಿ ಅವರಿಗೆ ಬಡ್ತಿ ನೀಡಲಾಯಿತು. 2002ರಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿ ಮರುನೇಮಕ ಆದರು. 2007ರಲ್ಲಿ ನಿವೃತ್ತಿ ಹೊಂದಿದರು.

ಮಾರುತಿ ಕಂಪನಿಯಲ್ಲಿನ ಹುದ್ದೆಗೂ ಮುನ್ನ ಐಎಎಸ್ ಅಧಿಕಾರಿಯಾಗಿ 37 ವರ್ಷಗಳ ಕರ್ತವ್ಯ ನಿಭಾಯಿಸಿದ್ದರು.

ಮಾರುತಿಯಿಂದ ಹೊರಬಂದ ಬಳಿಕ ಪ್ರೇಮ್‌ಜಿ ಇನ್‌ವೆಸ್ಟ್‌ ಮತ್ತು ಗಜ ಕ್ಯಾಪಿಟಲ್‌ನಂತಹ ಹೂಡಿಕೆದಾರರ ಜೊತೆಗೂಡಿ ಕಾರ್ನೇಷನ್‌ ಆಟೊ ಎನ್ನುವ ಕಾರು ಸೇವಾ ಸಂಸ್ಥೆ ಸ್ಥಾಪಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು