ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಹನ ಮಾರಾಟ ಶೇ 20ರಷ್ಟು ಹೆಚ್ಚಳ

ಗ್ರಾಮೀಣ ಭಾಗದಲ್ಲಿ ಸುಧಾರಿಸಿದ ಬೇಡಿಕೆ: ಎಫ್‌ಎಡಿಎ
Published 9 ಅಕ್ಟೋಬರ್ 2023, 13:45 IST
Last Updated 9 ಅಕ್ಟೋಬರ್ 2023, 13:45 IST
ಅಕ್ಷರ ಗಾತ್ರ

ನವದೆಹಲಿ: ವಾಹನಗಳ ರಿಟೇಲ್‌ ಮಾರಾಟವು 2022ರ ಸೆಪ್ಟೆಂಬರ್‌ಗೆ ಹೋಲಿಸಿದರೆ 2023ರ ಸೆಪ್ಟೆಂಬರ್‌ನಲ್ಲಿ ಶೇ 20ರಷ್ಟು ಏರಿಕೆ ಕಂಡಿದೆ ಎಂದು  ವಾಹನ ವಿತರಕರ ಸಂಘಟನೆಗಳ ಒಕ್ಕೂಟ (ಎಫ್‌ಎಡಿಎ) ಸೋಮವಾರ ಮಾಹಿತಿ ನೀಡಿದೆ. ಹಬ್ಬಗಳ ಋತು ಇರುವುದರಿಂದ ಬೇಡಿಕೆ ಹೆಚ್ಚಾಗುತ್ತಿದೆ ಎಂದು ಅದು ಹೇಳಿದೆ.

2022ರ ಸೆಪ್ಟೆಂಬರ್‌ನಲ್ಲಿ 15.63 ಲಕ್ಷ ವಾಹನಗಳು ಮಾರಾಟ ಆಗಿದ್ದವು. 2023ರ ಸೆಪ್ಟೆಂಬರ್‌ನಲ್ಲಿ 18.82 ಲಕ್ಷಕ್ಕೆ ಏರಿಕೆ ಕಂಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಹೊಸ ವಾಹನಗಳ ಬಿಡುಗಡೆ ಮತ್ತು ಆಕರ್ಷಕ ಕೊಡುಗೆಗಳಿಂದಾಗಿಯೂ ಬೇಡಿಕೆ ಹೆಚ್ಚಾಗಿದೆ. ಮುಖ್ಯವಾಗಿ ಗ್ರಾಮೀಣ ಭಾಗದಲ್ಲಿ ಬೇಡಿಕೆ ಸುಧಾರಿಸಿದ್ದು, ಒಟ್ಟಾರೆ ಮಾರಾಟದಲ್ಲಿ ಈ ಪ್ರಮಾಣದ ಏರಿಕೆಗೆ ಕಾರಣವಾಗಿದೆ. ಎಂದು ಒಕ್ಕೂಟದ ಅಧ್ಯಕ್ಷ ಮನಿಷ್‌ ರಾಜ್‌ ಸಿಂಘಾನಿಯಾ ತಿಳಿಸಿದ್ದಾರೆ.

ನವರಾತ್ರಿಯಿಂದ 42 ದಿನಗಳ ಹಬ್ಬದ ಋತು ಆರಂಭ ಆಗಲಿದೆ. ಈ ಅವಧಿಯಲ್ಲಿ ವಾಹನ ಮಾರಾಟದಲ್ಲಿ ಉತ್ತಮ ಬೆಳವಣಿಗೆ ಸಾಧಿಸುವ ವಿಶ್ವಾಸ ಇದೆ ಎಂದೂ ಅವರು ತಿಳಿಸಿದ್ದಾರೆ.

ಮಾರಾಟದ ವಿವರ

ವಾಹನ; 2022ರ ಸೆಪ್ಟೆಂಬರ್; 2023ರ ಸೆಪ್ಟೆಂಬರ್‌; ಏರಿಕೆ/ಇಳಿಕೆ

ಪ್ರಯಾಣಿಕ ವಾಹನ; 2,79,137; 3,32,248; 19%

ದ್ವಿಚಕ್ರ; 10,78,286; 13,12,101; 22%

ತ್ರಿಚಕ್ರ; 68,937; 1,02,426; 49%

ಟ್ರ್ಯಾಕ್ಟರ್‌; 60,321; 54,492; 10%

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT