ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್‌ ಸಾಲ ನೀಡಿಕೆ ಇಳಿಕೆ

Last Updated 11 ಏಪ್ರಿಲ್ 2020, 17:40 IST
ಅಕ್ಷರ ಗಾತ್ರ

ಮುಂಬೈ: ಬ್ಯಾಂಕ್‌ಗಳ ಸಾಲ ನೀಡಿಕೆಯು 2020ರ ಮಾರ್ಚ್ 31ರ ಅಂತ್ಯಕ್ಕೆ ಶೇ 6.14ರಷ್ಟು ಕುಸಿತ ಕಂಡಿದೆ. ಇದು 5 ದಶಕಗಳ ಕನಿಷ್ಠ ಮಟ್ಟವಾಗಿದೆ ಎಂದು ರಿಸರ್ವ್‌ ಬ್ಯಾಂಕ್‌ ಮಾಹಿತಿ ನೀಡಿದೆ.

ಆರ್ಥಿಕ ಬೆಳವಣಿಗೆಯು ಮಂದಗತಿ ಯಲ್ಲಿ ಸಾಗುತ್ತಿದ್ದು, ಬೇಡಿಕೆ ಕುಸಿತ ಮತ್ತು ಬ್ಯಾಂಕ್‌ಗಳ ಹಣಕಾಸು ಸ್ಥಿತಿ ಉತ್ತಮವಾಗಿ ಇಲ್ಲದೇ ಇರುವುದು ಈ ಪರಿಸ್ಥಿತಿಗೆ ಕಾರಣವಾಗಿದೆ ಎಂದಿದೆ.

ಬ್ಯಾಂಕ್‌ಗಳ ಮುಂಗಡವು ಶೇ 5.38ರಷ್ಟಿದ್ದು, ಇದು 1962ರ ಮಾರ್ಚ್‌ ನಂತರದ ಅತಿ ಕನಿಷ್ಠ ಮಟ್ಟವಾಗಿದೆ.

2020ರ ಮಾರ್ಚ್‌ 27ಕ್ಕೆ ಕೊನೆಗೊಂಡ ವಾರದಲ್ಲಿ ಮುಂಗಡ ₹ 103.7 ಲಕ್ಷ ಕೋಟಿ ಇದ್ದು, 2019 ಮಾರ್ಚ್‌ 29ರ ಅಂತ್ಯದಲ್ಲಿ ₹97.71 ಲಕ್ಷ ಕೋಟಿ ಇತ್ತು.

ಠೇವಣಿ ಸಂಗ್ರಹವು ಶೇ 7.93ರಷ್ಟು ಹೆಚ್ಚಾಗಿದ್ದು, 125.73 ಲಕ್ಷ ಕೋಟಿಗಳಿಂದ ₹ 135.71 ಲಕ್ಷ ಕೋಟಿಗಳಿಗೆ ಏರಿಕೆಯಾಗಿದೆ.

‘ದೇಶದ ಆರ್ಥಿಕ ಬೆಳವಣಿಗೆಯು ಮಂದಗತಿಯಲ್ಲಿ ಸಾಗುತ್ತಿದ್ದು, ಜೂನ್‌ ತ್ರೈಮಾಸಿಕದ ಬೆಳವಣಿಗೆ ದರದಲ್ಲಿ ಕೋವಿಡ್‌–19 ಪರಿಣಾಮವನ್ನು ಸ್ಪಷ್ಟವಾಗಿ ಕಾಣಿಸಲಿದೆ’ ಎಂದು ಫಿಚ್‌ ರೇಟಿಂಗ್ಸ್‌ನ ನಿರ್ದೇಶಕ ಎಸ್‌. ಗುಹಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT