ಭಾನುವಾರ, ಜನವರಿ 19, 2020
27 °C

ಬೆಮೆಲ್ ಷೇರು ವಿಕ್ರಯ ಸಾಧ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲ್ಕತ್ತ: ಕೇಂದ್ರ ಸರ್ಕಾರವು ‘ಬಿಇಎಂಎಲ್‌’ನಲ್ಲಿ (ಬೆಮೆಲ್‌) ಹೊಂದಿರುವ ಪಾಲು ಬಂಡವಾಳದಲ್ಲಿ ಶೇ 28ರಷ್ಟನ್ನು ಮಾರಾಟ ಮಾಡುವ ಸಾಧ್ಯತೆ ಇದೆ ಎಂದು ಕಂಪನಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸರ್ಕಾರವು ಕಂಪನಿಯಲ್ಲಿ ಸದ್ಯಕ್ಕೆ ಶೇ 54.03ರಷ್ಟು ಪಾಲು ಬಂಡವಾಳ ಹೊಂದಿದೆ. ಆರ್ಥಿಕ ವ್ಯವಹಾರಗಳ ಸಂಸತ್ ಸಮಿತಿಯು ಶೇ 26ರಷ್ಟು ಷೇರು ಮಾರಾಟ ಮಾಡಲು ಒಪ್ಪಿಗೆ ನೀಡಿದೆ. ವಹಿವಾಟು ವಿಭಾಗಿಸುವ ಯೋಚನೆ ಸರ್ಕಾರಕ್ಕೆ ಇಲ್ಲ. ಷೇರು ವಿಕ್ರಯಕ್ಕೆ ಈಗಾಗಲೇ ಸಿದ್ಧತೆ ಆರಂಭಿಸಿದೆ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ‘ಬೆಮೆಲ್‌’, ರೈಲ್ವೆ ಬೋಗಿ, ರಕ್ಷಣಾ ಸಲಕರಣೆ ತಯಾರಿಕೆಯ ಪ್ರಮುಖ ಕೇಂದ್ರೋದ್ಯಮವಾಗಿದೆ.

ಪ್ರಸಕ್ತ ಹಣಕಾಸು ವರ್ಷಕ್ಕೆ ಷೇರು ವಿಕ್ರಯದ ಮೂಲಕ ₹ 1.05 ಲಕ್ಷ ಕೋಟಿ ಸಂಗ್ರಹಿಸುವ ಗುರಿ ಹೊಂದಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು