ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐ.ಟಿ, ಆಟೊಮೊಬೈಲ್‌ ಷೇರು ಗಳಿಕೆ, ಸೆನ್ಸೆಕ್ಸ್ ಏರಿಕೆ

Last Updated 6 ಮೇ 2021, 16:36 IST
ಅಕ್ಷರ ಗಾತ್ರ

ಮುಂಬೈ: ಆಟೊಮೊಬೈಲ್‌, ಹಣಕಾಸು ಮತ್ತು ಐ.ಟಿ. ವಲಯಗಳ ಷೇರುಗಳ ಖರೀದಿಯು ಗುರುವಾರ ಬಿರುಸಿನಿಂದ ನಡೆಯಿತು. ಇದರಿಂದಾಗಿ ದೇಶದ ಷೇರುಪೇಟೆ ಸೂಚ್ಯಂಕಗಳು ಸತತ ಎರಡನೆಯ ದಿನವೂ ಏರಿಕೆ ದಾಖಲಿಸಿದವು.

ಕೋವಿಡ್–19 ಲಸಿಕೆಗಳ ಮೇಲಿನ ಬೌದ್ಧಿಕ ಆಸ್ತಿ ಹಕ್ಕುಗಳನ್ನು ತೆಗೆಯುವ ನಿಲುವಿಗೆ ಅಮೆರಿಕದ ಸರ್ಕಾರ ಬೆಂಬಲ ನೀಡಿದ್ದು ಮಾರುಕಟ್ಟೆಯಲ್ಲಿ ಉತ್ಸಾಹದ ವಾತಾವರಣ ನಿರ್ಮಾಣ ಆಗುವಂತೆ ಮಾಡಿತು. ಈ ಬೆಂಬಲವು ಕಾರ್ಯರೂಪಕ್ಕೆ ಬಂದರೆ ಭಾರತ ಹಾಗೂ ಇತರ ಕೆಲವು ದೇಶಗಳಲ್ಲಿ ಲಸಿಕೆ ನೀಡುವ ಪ್ರಕ್ರಿಯೆಗೆ ವೇಗ ಸಿಗಬಹುದು ಎಂಬ ಆಶಾವಾದ ಹೂಡಿಕೆದಾರರಲ್ಲಿ ಮೂಡಿದೆ ಎಂದು ವರ್ತಕರು ತಿಳಿಸಿದ್ದಾರೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು 272 ಅಂಶ ಏರಿಕೆ ಕಂಡಿತು, ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 106 ಅಂಶ ಏರಿಕೆ ಕಂಡಿತು. ಸೆನ್ಸೆಕ್ಸ್‌ನಲ್ಲಿ ಬಜಾಜ್ ಆಟೊ, ಎಚ್‌ಡಿಎಫ್‌ಸಿ, ಟೆಕ್ ಮಹೀಂದ್ರ, ಇನ್ಫೊಸಿಸ್, ನೆಸ್ಲೆ ಇಂಡಿಯಾ, ಮಾರುತಿ ಮತ್ತು ಟೈಟಾನ್ ಕಂಪನಿಯ ಷೇರುಗಳು ಏರಿಕೆ ಕಂಡವು.

ಅಮೆರಿಕದ ಡಾಲರ್ ಎದುರು 13 ಪೈಸೆ ಚೇತರಿಕೆ ಕಂಡ ರೂಪಾಯಿ ಮೌಲ್ಯ, ದಿನದ ವಹಿವಾಟಿನ ಅಂತ್ಯಕ್ಕೆ 73.78ಕ್ಕೆ ತಲುಪಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT