ಆಸ್ತಿ ಸಲಹಾ ಕಂಪನಿ ಆಗಿರುವ ನೈಟ್ ಫ್ರ್ಯಾಂಕ್, ‘2023ರ ಏಷ್ಯಾ–ಪೆಸಿಫಿಕ್ ಮುನ್ನೋಟ’ದ ವರದಿಯನ್ನು ಬಿಡುಗಡೆ ಮಾಡಿದ್ದು, ಅದರಂತೆ, ಕಾರ್ಪೊರೇಟ್ ಕಂಪನಿಗಳು ವೆಚ್ಚ ತಗ್ಗಿಸಲು ಮತ್ತು ಉಳಿತಾಯದತ್ತ ಗಮನ ಹರಿಸಲು ಮುಂದಾಗಿವೆ. ಹೀಗಾಗಿ ಏಷ್ಯಾ–ಪೆಸಿಫಿಕ್ ಪ್ರದೇಶದಲ್ಲಿ 2023ರಲ್ಲಿ ಕಚೇರಿ ಬಾಡಿಗೆಯು ನಿಧಾನಗತಿಯಲ್ಲಿ ಏರಿಕೆ ಕಾಣಲಿದೆ.