ಶನಿವಾರ, ಮೇ 21, 2022
20 °C

ಭಾರತ್‌ ಬಾಂಡ್‌ ಇಟಿಎಫ್‌: ಡಿ.3ರಿಂದ ಮೂರನೇ ಕಂತು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭಾರತ್‌ ಬಾಂಡ್‌ ಇಟಿಎಫ್‌ನ ಮೂರನೇ ಕಂತು ಡಿಸೆಂಬರ್‌ 3ರಂದು ಆರಂಭ ಆಗಲಿದ್ದು, ಕೇಂದ್ರ ಸರ್ಕಾರವು ₹ 10 ಸಾವಿರ ಕೋಟಿ ಸಂಗ್ರಹಿಸುವ ನಿರೀಕ್ಷೆ ಇಟ್ಟುಕೊಂಡಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಡಿ. 3ರಿಂದ 9ರವರೆಗೆ ಖರೀದಿಗೆ ಅವಕಾಶ ಇರಲಿದೆ ಎಂದು ತಿಳಿಸಿದ್ದಾರೆ. ಎಡೆಲ್ವಿಸ್ ಅಸೆಟ್‌ ಮ್ಯಾನೇಜ್‌ಮೆಂಟ್‌ ಈ ಯೋಜನೆಯ ನಿಧಿ ನಿರ್ವಾಹಕ ಆಗಿದೆ. ಇಲ್ಲಿ ಸಂಗ್ರಹ ಆಗುವ ಬಂಡವಾಳವು ಸರ್ಕಾರದ ಬಂಡವಾಳ ವೆಚ್ಚದ ಅಗತ್ಯ ಪೂರೈಸಿಕೊಳ್ಳಲು ನೆರವಾಗಲಿದೆ. 2019ರ ಡಿಸೆಂಬರ್‌ ಮತ್ತು 2020ರ ಜುಲೈ ಅವಧಿಯಲ್ಲಿ ಬಿಡುಗಡೆ ಮಾಡಿದ್ದ ಕಂತುಗಳ ಯಶಸ್ಸಿನ ಬಳಿಕ ಮೂರನೇ ಕಂತು ಬಿಡುಗಡೆ ಮಾಡಲಾಗುತ್ತಿದೆ.

ಭಾರತ್‌ ಬಾಂಡ್ ಇಟಿಎಫ್‌ನ ಎರಡನೇ ಕಂತಿನಲ್ಲಿ ₹ 11 ಸಾವಿರ ಕೋಟಿ ಸಂಗ್ರಹ ಆಗುವ ಅಂದಾಜು ಮಾಡಲಾಗಿತ್ತು. ಆದರೆ ₹ 12,400 ಕೋಟಿ ಮೊತ್ತ ಸಂಗ್ರಹ ಆಗಿತ್ತು. ಅಕ್ಟೋಬರ್‌ ಅಂತ್ಯದ ವೇಳೆಗೆ ಭಾರತ್‌ ಬಾಂಡ್‌ ಇಟಿಎಫ್‌ನ ನಿರ್ವಹಣಾ ಸಂಪತ್ತು ಮೌಲ್ಯವು ₹ 36 ಸಾವಿರ ಕೋಟಿಗಳಷ್ಟು ಇತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.