ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರ್ತಿ ಇನ್ಫ್ರಾಟೆಲ್‌ ಸಭೆ ನಾಳೆ

ಇಂಡಸ್‌ ಟವರ್ಸ್ ವಿಲೀನಕ್ಕೆ ದೂರಸಂಪರ್ಕ ಇಲಾಖೆ ಅನುಮತಿ
Last Updated 22 ಫೆಬ್ರುವರಿ 2020, 22:01 IST
ಅಕ್ಷರ ಗಾತ್ರ

ನವದೆಹಲಿ: ಇಂಡಸ್‌ ಟವರ್ಸ್‌ ಅನ್ನುವಿಲೀನಗೊಳಿಸಿಕೊಳ್ಳುವ ಕುರಿತು ಮುಂದಿನ ನಿರ್ಧಾರ ಕೈಗೊಳ್ಳಲು ಭಾರ್ತಿ ಏರ್‌ಟೆಲ್‌ನ ಆಡಳಿತ ಮಂಡಳಿ ಸೋಮವಾರ ಸಭೆ ಸೇರಲಿದೆ.

ದೂರಸಂಪರ್ಕ ಇಲಾಖೆಯು ವಿಲೀನಕ್ಕೆ ಶುಕ್ರವಾರ ಒಪ್ಪಿಗೆ ಸೂಚಿಸಿತ್ತು. ವಿಲೀನದ ಬಳಿಕಇಂಡಸ್‌ ಟವರ್ಸ್‌ ಲಿಮಿಟೆಡ್‌ ಎನ್ನುವ ಹೆಸರಿನಲ್ಲಿ ಕಾರ್ಯಾಚರಣೆ ಮುಂದುವರಿಸಲಿದ್ದು, ಚೀನಾದಾಚೆಗೆ ವಿಶ್ವದಲ್ಲಿಯೇ ಅತಿ ದೊಡ್ಡ ಟವರ್‌ ಕಂಪನಿಯಾಗಿ ಹೊರ
ಹೊಮ್ಮಲಿದೆ. ಕಂಪನಿಗಳ ವಿಲೀನಕ್ಕೆ ಎಫ್‌ಡಿಐ ಒಪ್ಪಿಗೆಯನ್ನು ಪಡೆಯಲಾಗಿದೆ ಎಂದು ಭಾರ್ತಿ ಇನ್ಫ್ರಾಟೆಲ್‌ ಷೇರುಪೇಟೆಗೆ ತಿಳಿಸಿದೆ.

ಹೊಸ ಕಂಪನಿಯು 22 ದೂರಸಂಪರ್ಕ ಸೇವಾ ‍ಪ್ರದೇಶಗಳಲ್ಲಿ ಕಾರ್ಯಚರಣೆ ನಡೆಸಲಿದ್ದು, ಒಟ್ಟು ಟವರ್‌ಗಳ ಸಂಖ್ಯೆ 1.63 ಲಕ್ಷಕ್ಕೆ ಏರಿಕೆಯಾಗಲಿದೆ.

ನಷ್ಟದಲ್ಲಿರುವ ವೊಡಾಫೋನ್‌ ಐಡಿಯಾ ಮತ್ತು ಭಾರ್ತಿ ಕಂಪನಿಗಳಿಗೆ ಈ ವಿಲೀನವು ಹೆಚ್ಚು ಪ್ರಯೋಜನಕಾರಿಯಾಗಿ ಪರಿಣಮಿಸಲಿದೆ. ಸಕಾಲಕ್ಕೆ ಒಪ್ಪಂದ ನಡೆದರೆ, ಭಾರ್ತಿ ಏರ್‌ಟೆಲ್‌ ಮತ್ತು ವೊಡಾಫೋನ್‌ ಐಡಿಯಾ ಕಂಪನಿಗಳು ಇಂಡಸ್‌ ಟವರ್ಸ್‌ನಲ್ಲಿ ಹೊಂದಿರುವ ಷೇರುಗಳನ್ನು ಮಾರಾಟ ಮಾಡುವ ಮೂಲಕ ಬಂಡವಾಳ ಸಂಗ್ರಹಿಸಲು ಅನುಕೂಲ ಆಗಲಿದೆ.

ವೊಡಾಫೋನ್‌ ಐಡಿಯಾ ಕಂಪನಿ ಹೊಂದಾಣಿಕೆ ಮಾಡಿದ ಒಟ್ಟು ವರಮಾನದ (ಎಜಿಆರ್‌) ಬಾಕಿ ₹ 53,048 ಕೋಟಿಯನ್ನು ಸರ್ಕಾರಕ್ಕೆ ಪಾವತಿಸಬೇಕಿದ್ದು, ಅದರಲ್ಲಿ ಕೇವಲ ₹ 3,500 ಕೋಟಿ ಪಾವತಿಸಿದೆ.

15 ಕಂಪನಿಗಳು ಒಟ್ಟಾರೆಯಾಗಿ ₹ 1.47 ಲಕ್ಷ ಕೋಟಿ ಎಜಿಆರ್‌ ಬಾಕಿ ಪಾವತಿಸಬೇಕಿದೆ. ಇದರಲ್ಲಿ ಪರವಾನಗಿ ಶುಲ್ಕ ₹ 92,642 ಕೋಟಿ ಇದ್ದರೆ, ತರಂಗಾಂತರ ಬಳಕೆ ಶುಲ್ಕ ₹ 55,054 ಕೋಟಿಗಳಷ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT