ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೀಮ ಜುವೆಲರ್ಸ್‌ನಿಂದ ಟ್ಯಾಬ್ ವಿತರಣೆ

Last Updated 28 ಜುಲೈ 2021, 15:09 IST
ಅಕ್ಷರ ಗಾತ್ರ

ಬೆಂಗಳೂರು: ಭೀಮ ಜುವೆಲರ್ಸ್ ಕಂಪನಿಯು ತನ್ನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ಚಟುವಟಿಕೆಯ ಭಾಗವಾಗಿ ಮಕ್ಕಳಿಗೆ ಟ್ಯಾಬ್‌ಗಳು ಹಾಗೂ ದುರ್ಬಲ ವರ್ಗಗಳಿಗೆ ಸೇರಿದವರಿಗೆ ದಿನಸಿ ಕಿಟ್‌ಗಳನ್ನು ಉಚಿತವಾಗಿ ವಿತರಿಸಿದೆ.

ಭೀಮ ಜುವೆಲರ್ಸ್‌ನ 97ನೇ ಸಂಸ್ಥಾಪನಾ ದಿನದ ಅಂಗವಾಗಿ ಕೋರಮಂಗಲದ ಮಳಿಗೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಇವುಗಳನ್ನು ವಿತರಿಸಲಾಗಿದೆ. ‘ಒನ್‌ ಬಿಲಿಯನ್ ಲಿಟರೇಟ್ಸ್‌ ಫೌಂಡೇಷನ್’ ಮೂಲಕ ಒಟ್ಟು ₹ 4.75 ಲಕ್ಷ ಮೌಲ್ಯದ 50 ಟ್ಯಾಬ್‌ಗಳನ್ನು ವಿತರಿಸಲಾಗಿದೆ.

ನಾಗವಾರಪಾಳ್ಯ, ಕಗ್ಗದಾಸಪುರ, ವಿದ್ಯಾರಣ್ಯಪುರದ ಕೊಳೆಗೇರಿ ನಿವಾಸಿಗಳು, ವಲಸೆ ಕಾರ್ಮಿಕರು, ದಿನಗೂಲಿ ನೌಕರರು ಹಾಗೂ ತೃತೀಯ ಲಿಂಗಿಗಳಿಗೆ ಒಟ್ಟು ₹ 5 ಲಕ್ಷ ಮೌಲ್ಯದ 500 ದಿನಸಿ ಕಿಟ್‌ಗಳನ್ನು ವಿತರಿಸಲಾಗಿದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ. ‘ಸಮಾಜದ ದುರ್ಬಲ ವರ್ಗಗಳಿಗೆ ನೆರವಾಗುವುದು ನಮ್ಮ ಭಾಗ್ಯ. ಇಂತಹ ಕುಟುಂಬಗಳಿಗೆ ಸಹಾಯ ಮಾಡುವುದು ನಮ್ಮ ಕರ್ತವ್ಯವೂ ಹೌದು’ ಎಂದು ‘ಭೀಮ’ದ ನಿರ್ದೇಶಕ ವಿಷ್ಣುಶರಣ್ ಕೆ. ಭಟ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT