‘ಸಿಮೆಂಟ್, ಉಕ್ಕು ಉದ್ಯಮದಿಂದ ಬೆಲೆ ಹೆಚ್ಚಳ ಕೂಟ’
ಮುಂಬೈ: ಉಕ್ಕು ಮತ್ತು ಸಿಮೆಂಟ್ ಉದ್ಯಮದ ದೊಡ್ಡ ಕಂಪನಿಗಳು ಬೆಲೆ ಹೆಚ್ಚಿಸಲು ಕೂಟ ರಚಿಸಿಕೊಂಡಿವೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಆರೋಪಿಸಿದ್ದಾರೆ.
ಈ ವಿಚಾರವಾಗಿ ತಾವು ಪ್ರಧಾನಿ ಹಾಗೂ ಪ್ರಧಾನಮಂತ್ರಿ ಕಚೇರಿಯ ಪ್ರಧಾನ ಕಾರ್ಯದರ್ಶಿ ಜೊತೆ ಮಾತುಕತೆ ನಡೆಸಿರುವುದಾಗಿಯೂ ಗಡ್ಕರಿ ತಿಳಿಸಿದ್ದಾರೆ. ಉಕ್ಕು ಉದ್ಯಮದ ಎಲ್ಲ ಕಂಪನಿಗಳು ತಮ್ಮದೇ ಆದ ಕಬ್ಬಿಣದ ಅದಿರು ಗಣಿ ಹೊಂದಿವೆ. ಅವು ಕಾರ್ಮಿಕರ ಅಥವಾ ಇಂಧನ ವೆಚ್ಚದಲ್ಲಿ ಹೆಚ್ಚಳ ಕಂಡಿಲ್ಲ. ಹೀಗಿದ್ದರೂ, ಉಕ್ಕು ಉದ್ಯಮವು ಬೆಲೆ ಹೆಚ್ಚಿಸುತ್ತಿರುವುದು ಹೇಗೆ ಎಂದು ಗಡ್ಕರಿ ಪ್ರಶ್ನಿಸಿದರು.
‘ಈ ಸಮಸ್ಯೆಗೆ ಪರಿಹಾರ ಕಾಣುವ ಹಾದಿಯಲ್ಲಿ ನಾವಿದ್ದೇವೆ. ಉಕ್ಕು ಮತ್ತು ಸಿಮೆಂಟ್ ಉದ್ಯಮಕ್ಕೆ ನಿಯಂತ್ರಕರು ಬೇಕು ಎಂಬ ಆಗ್ರಹವನ್ನು ಪರಿಶೀಲಿಸಲಾಗುವುದು. ಇದರ ಬಗ್ಗೆ ನಾನು ಹಣಕಾಸು ಸಚಿವಾಲಯ ಹಾಗೂ ಪ್ರಧಾನಿ ಜೊತೆ ಮಾತನಾಡುವೆ’ ಎಂದರು.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.