ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಯರ್ಸನ್ ಇಂಡಿಯಾದಿಂದ ಪುಸ್ತಕ ಮಾರಾಟ ಯಂತ್ರ ಲೋಕಾರ್ಪಣೆ

Published 4 ಮಾರ್ಚ್ 2024, 9:40 IST
Last Updated 4 ಮಾರ್ಚ್ 2024, 9:40 IST
ಅಕ್ಷರ ಗಾತ್ರ

ಬೆಂಗಳೂರು: ಕಲಿಕಾ ಕಂಪನಿಯಾದ ಪಿಯರ್ಸನ್ ಇಂಡಿಯಾವು ಭಾರತದಲ್ಲಿ ತನ್ನ ಪ್ರಥಮ ಪುಸ್ತಕ ವಿತರಣಾ ಯಂತ್ರವನ್ನು ಬೆಂಗಳೂರಿನಲ್ಲಿ ಸೋಮವಾರ ಲೋಕಾರ್ಪಣೆಗೊಳಿಸಿದೆ.

ಇದು ಕಲಿಯುವವರಿಗೆ ನೇರವಾಗಿ ತಲುಪುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಗ್ರಾಹಕರಿಗೆ ನೇರವಾಗಿ ಅವರ ಖರೀದಿ ಅನುಭವವನ್ನು ಹೆಚ್ಚಿಸುವ ಮೂಲಕ ಶೈಕ್ಷಣಿಕ ಪುಸ್ತಕಗಳನ್ನು ಸುಲಭವಾಗಿ ಒದಗಿಸುವ ಗುರಿ ಹೊಂದಲಾಗಿದೆ. ಬೆಂಗಳೂರಿನ ರಿಚ್‌ಮಂಡ್‌ ರಸ್ತೆಯಲ್ಲಿರುವ ಪಿಯರ್ಸನ್ ಇಂಡಿಯಾ ಕಚೇರಿಯಲ್ಲಿ ಇದನ್ನು ಸ್ಥಾಪಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

ಪ್ರಸ್ತುತ ಪಿಯರ್ಸನ್ ಪ್ರಕಟಿಸಿರುವ ಕಲಿಕೆ ಮತ್ತು ಶಿಕ್ಷಣ ಪುಸ್ತಕಗಳ ಇತ್ತೀಚಿನ ಆವೃತ್ತಿಗಳು ಇಲ್ಲಿ ಲಭ್ಯವಿವೆ. ವಿದ್ಯಾರ್ಥಿಗಳು ಮತ್ತು ವೃತ್ತಿಪರರು ಸೇರಿದಂತೆ ಗ್ರಾಹಕರಿಗೆ ಪುಸ್ತಕ ಖರೀದಿಸಲು ಯುಪಿಐ ಮೂಲಕ ವೆಂಡಿಂಗ್ ಮೆಷಿನ್‌ನಲ್ಲಿ ನೇರ ಪಾವತಿಗೆ ಅವಕಾಶ ಕಲ್ಪಿಸಲಾಗಿದೆ. 30 ಸೆಕೆಂಡುಗಳಿಗಿಂತ ಕಡಿಮೆ ಅವಧಿಯಲ್ಲಿ ತಮ್ಮ ಇಷ್ಟದ ಪುಸ್ತಕವನ್ನು ಪುಸ್ತಕ ಪ್ರಿಯರು ಪಡೆಯಬಹುದು. ಶೀಘ್ರವೇ, ದೇಶದ ವಿವಿಧ ಭಾಗಗಳಲ್ಲಿ ಇಂತಹ ಮಾರಾಟ ಯಂತ್ರಗಳನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದೆ. 

‘ಭಾರತದಲ್ಲಿ ಇರುವ ನಮ್ಮ ಗ್ರಾಹಕರಿಗೆ ಕಲಿಕಾ ಸಾಮಗ್ರಿಗಳ ಲಭ್ಯತೆ ಹೆಚ್ಚಿಸಲು ಈ ಕ್ರಮವಹಿಸಲಾಗಿದೆ. ದೇಶದಲ್ಲಿ ವಿದ್ಯಾರ್ಥಿಗಳು ಮತ್ತು ಕಲಿಯುವವರಲ್ಲಿ ತಮ್ಮ ಪ್ರವೇಶ ಪರೀಕ್ಷೆಗಳಿಗೆ ಮತ್ತು ಶೈಕ್ಷಣಿಕ ತಯಾರಿಗಾಗಿ ಸೂಕ್ತ ಆಕರ ಪುಸ್ತಕಗಳನ್ನು ಖರೀದಿಸುವ ಪ್ರವೃತ್ತಿ ಹೆಚ್ಚುತ್ತಿದೆ. ಈ ಪುಸ್ತಕ ವಿತರಣಾ ಯಂತ್ರವು ಇಂದಿನ ಮಾರುಕಟ್ಟೆ ಅವಕಾಶದಲ್ಲಿ ಲಾಭ ಮಾಡಿಕೊಳ್ಳಲು ಸಹಕಾರಿಯಾಗಿದೆ’ ಎಂದು ಪಿಯರ್ಸನ್ ಇಂಡಿಯಾದ ಮುಖ್ಯಸ್ಥ ವಿನಯ್ ಸ್ವಾಮಿ ತಿಳಿಸಿದ್ದಾರೆ.

ಎಲ್ಲಿ ಲಭ್ಯ?: ಈ ಪುಸ್ತಕ ಮಾರಾಟ ಯಂತ್ರವನ್ನು ಪಿಯರ್ಸನ್ ಕಚೇರಿ, ದಿವ್ಯಶ್ರೀ ಚೇಂಬರ್ಸ್, ನೆಲ ಮಹಡಿ, ಎ ವಿಂಗ್ 11,  ಶೌಘನೆಸ್ಸಿ ರಸ್ತೆ, ಬೆಂಗಳೂರು 560025– ಇಲ್ಲಿ ಇರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT