ಗುರುವಾರ , ಮಾರ್ಚ್ 30, 2023
32 °C

ಇ–ಸ್ಕೂಟರ್‌ ತಯಾರಿಕೆ, ಬ್ಯಾಟರಿ ಮೂಲಸೌಕರ್ಯಕ್ಕೆ ₹ 742 ಕೋಟಿ ಹೂಡಿಕೆ: ಬೌನ್ಸ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ವಿದ್ಯುತ್ ಚಾಲಿತ ಸ್ಕೂಟರ್‌ಗಳನ್ನು ಬಾಡಿಗೆ ಆಧಾರದ ಮೇಲೆ ನೀಡುವ ಬೌನ್ಸ್‌ ಕಂಪನಿಯು ಇ–ಸ್ಕೂಟರ್‌ ತಯಾರಿಕೆ ಮತ್ತು ಬ್ಯಾಟರಿ ಸ್ವ್ಯಾಪಿಂಗ್‌ ಮೂಲಸೌಕರ್ಯ ಕಲ್ಪಿಸುವ ಸಲುವಾಗಿ ಮುಂದಿನ ಒಂದು ವರ್ಷದಲ್ಲಿ ₹ 742 ಕೋಟಿ ಹೂಡಿಕೆ ಮಾಡಲಿದೆ ಎಂದು ಕಂಪನಿಯ ಸಹ ಸ್ಥಾಪಕ ವಿವೇಕಾನಂದ ಹಳ್ಳೆಕೆರೆ ತಿಳಿಸಿದ್ದಾರೆ.

ಇದೇ ತಿಂಗಳ ಅಂತ್ಯದ ವೇಳೆಗೆ ಕಂಪನಿಯು ತನ್ನ ಮೊದಲ ಇ–ಸ್ಕೂಟರ್‌ ಅನಾವರಣ ಮಾಡಲಿದ್ದು, ಮುಂದಿನ ವರ್ಷದ ಫೆಬ್ರುವರಿಯಿಂದ ವಿತರಣೆ ಆರಂಭವಾಗಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. 1 ಲಕ್ಷಕ್ಕೂ ಅಧಿಕ ಮುಂಗಡ ಬುಕಿಂಗ್‌ ಆಗಲಿದೆ ಎನ್ನುವ ನಿರೀಕ್ಷೆಯನ್ನು ಕಂಪನಿ ಇಟ್ಟುಕೊಂಡಿದೆ.

ಎರಡು ರೀತಿಯ ಬೆಲೆಯಲ್ಲಿ ಸ್ಕೂಟರ್‌ ಲಭ್ಯ ಇರಲಿದೆ. ಮೊದಲನೆಯದು ಬ್ಯಾಟರಿ ಸಹಿತ. ಅದರ ಬೆಲೆ ₹ 70 ಸಾವಿರದ ಒಳಗೆ ಹಾಗೂ ಬ್ಯಾಟರಿ ಇಲ್ಲದೇ ಇರುವ ಸ್ಕೂಟರ್ ಬೆಲೆಯು ₹ 50 ಸಾವಿರದ ಒಳಗೆ ಆಗಬೇಕು ಎನ್ನುವ ಆಲೋಚನೆ ಮಾಡಲಾಗಿದೆ ಎಂದೂ ಅವರು ಹೇಳಿದ್ದಾರೆ.

ಸದ್ಯ ರಾಜಸ್ಥಾನದ ಬಿವಾಡಿಯಲ್ಲಿ ಒಂದು ತಯಾರಿಕಾ ಘಟಕ ಹೊಂದಿದ್ದು, ವಾರ್ಷಿಕ 1.8 ಲಕ್ಷ ಸ್ಕೂಟರ್ ತಯಾರಿಕೆಯ ಸಾಮರ್ಥ್ಯವನ್ನು ಇದು ಹೊಂದಿದೆ. ಮುಂದಿನ ಮೂರ್ನಾಲ್ಕು ತ್ರೈಮಾಸಿಕಗಳಲ್ಲಿ ಒಂದು ಸಾವಿರಕ್ಕೂ ಅಧಿಕ ಮಂದಿಗೆ ಉದ್ಯೋಗ ಅವಕಾಶವನ್ನು ಅದು ಸೃಷ್ಟಿಸಲಿದೆ. ಸದ್ಯ 100 ಮಂದಿ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಬೌನ್ಸ್‌ ಕಂಪನಿಯು 22 ಮೋಟರ್ಸ್‌ ಕಂಪನಿಯನ್ನು ಖರೀದಿ ಮಾಡಿದ್ದು, ಬಿವಾಡಿಯಲ್ಲಿ ಇರುವ ತಯಾರಿಕಾ ಘಟಕವೂ ಈ ಖರೀದಿಯಲ್ಲಿ ಸೇರಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು