ಶುಕ್ರವಾರ, ಜುಲೈ 30, 2021
20 °C

ಬೌನ್ಸ್‌: ಸುರಕ್ಷಿತ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೀ ರಹಿತ ಬಾಡಿಗೆ ಸ್ಕೂಟರ್‌ (dock-less) ಸೇವೆ ಒದಗಿಸುವ ಬೌನ್ಸ್ , ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರ ಕಚೇರಿಯಲ್ಲಿ ಶುಕ್ರವಾರ ತನ್ನ ಸುರಕ್ಷಿತ ಚಾಲನೆ  (#SafeMove) ಕಾರ್ಯಕ್ರಮ ಹಮ್ಮಿಕೊಂಡಿತ್ತು.

 ಬೌನ್ಸ್‌ ಸಹ-ಸಂಸ್ಥಾಪಕ ಅನಿಲ್‌ ಜಿ ಅವರು, ಬೌನ್ಸ್‌ ಸ್ಕೂಟರ್‌ಗಳು ಗ್ರಾಹಕರಿಗೆ ಸುರಕ್ಷಿತವಾಗಿರಿಸಲು ತೆಗೆದುಕೊಂಡಿರುವ  ಕ್ರಮಗಳನ್ನು  ಪರಿಚಯಿಸಿದರು. ಸವಾರರ ಸುರಕ್ಷತೆಗೆ ತೆಗೆದುಕೊಂಡಿರುವ ಕ್ರಮಗಳನ್ನು ತೇಜಸ್ವಿ ಸೂರ್ಯ ಅವರು ಶ್ಲಾಘಿಸಿದ್ದಾರೆ.

 ಪ್ರತಿಯೊಂದು ಬೌನ್ಸ್‌ ಸ್ಕೂಟರ್‌ ಅನ್ನು ರೋಗಾಣು  ನಾಶ ಮಾಡುವ  ಆ್ಯಂಟಿ ಮೈಕ್ರೊಬಿಯಲ್‌ ಸಲ್ಯೂಷನ್‌ದಿಂದ  ಶುಚಿಗೊಳಗಿಸಲಾಗಿದೆ. ಇದು ಸ್ಕೂಟರ್‌ನ ಮೇಲ್ಮೈಯನ್ನು  ಸಮಗ್ರವಾಗಿ ಸ್ಯಾನಿಟೈಜ್‌ ಮಾಡುತ್ತದೆ.  ವೈರಸ್‌ಗಳನ್ನು  ನಿರ್ಮೂಲನೆ ಮಾಡುತ್ತದೆ. ಈ  ಪರಿಸರ ಸ್ನೇಹಿ ಸಲ್ಯೂಷನ್‌ ಒಮ್ಮೆ ಹಚ್ಚಿದರೆ 3 ತಿಂಗಳವರೆಗೂ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಇದು ಉಜ್ಜಿದರೂ ಹೋಗುವುದಿಲ್ಲ ಹಾಗೂ ಚರ್ಮಕ್ಕೂ ಅಂಟಿಕೊಳ್ಳುವುದಿಲ್ಲ ಎಂದು ಅನಿಲ್‌ ಜಿ. ತಿಳಿಸಿದ್ದಾರೆ.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು