ಬೆಂಗಳೂರು: ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್ ತನ್ನ ಠೇವಣಿಗಳ ಮೇಲಿನ ಹೆಚ್ಚುವರಿ ವೆಚ್ಚ ಆಧರಿಸಿದ (ಎಂಸಿಎಲ್‌ಆರ್) ಬಡ್ಡಿದರವನ್ನು ಶೇ 0.10ರಷ್ಟು ಇಳಿಕೆ ಮಾಡಿದೆ.

ಪರಿಷ್ಕೃತ ಬಡ್ಡಿದರಗಳು ಬುಧವಾರದಿಂದಲೇ ಜಾರಿಗೆ ಬಂದಿವೆ.ಆರು ತಿಂಗಳಿನಲ್ಲಿ ಎಂಸಿಎಲ್‌ಆರ್ ನಲ್ಲಿ ಶೇ 0.20ರಷ್ಟು ತಗ್ಗಿಸಲಾಗಿದೆ. ಇದರಿಂದ ಒಂದು ವರ್ಷಗಳ ಎಂಸಿಎಲ್‌ಆರ್ ಶೇ 8.70ರಿಂದ ಶೇ 8.50ಕ್ಕೆ ಇಳಿಕೆಯಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಮಲಬಾರ್ ಉತ್ಸವ

ಜಗತ್ತಿನ ಅತ್ಯಂತ ದೊಡ್ಡ ಚಿನ್ನ ಮತ್ತು ವಜ್ರದ ರೀಟೇಲ್ ಸರಣಿಗಳಲ್ಲಿ ಒಂದಾಗಿರುವ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್, ರಾಜ್ಯದಲ್ಲಿ ಅಮೂಲ್ಯವಾದ ಪ್ರೆಸಿಯಾ ಮತ್ತು ಎರಾ ಬ್ರ್ಯಾಂಡ್‌ಗಳ ಹರಳುಗಳ ಉತ್ಸವ ಆಯೋಜಿಸಿದೆ. ಶನಿವಾರದಿಂದ ಇದೇ 30ರವರೆಗೂ ನಡೆಯಲಿದೆ.

ಎಮರಾಲ್ಡ್, ರೂಬಿ, ಬ್ಲೂ ಸಫಾಯರ್ ಮುಂತಾದ ಅಮೂಲ್ಯ ಹರಳುಗಳನ್ನು ಈ ಉತ್ಸವ ಒಳಗೊಂಡಿದೆ.

ಶೇ 100ರಷ್ಟು ಪ್ರಾಮಾಣೀಕೃತ ಅಮೂಲ್ಯ ಹರಳುಗಳನ್ನು ಸಾದರಪಡಿ ಸುತ್ತಿದ್ದು, ಜತೆಗೆ, ಜೀವನಪರ್ಯಂತ ಉಚಿತ ನಿರ್ವಹಣೆ, ಒಂದು ವರ್ಷ ಉಚಿತ ವಿಮೆ ಸಂರಕ್ಷಣೆ, ಪಾರದರ್ಶಕ ಮತ್ತು ವಿವರವಾದ ಬೆಲೆ ಮತ್ತು ಬೈಬ್ಯಾಕ್ ಗ್ಯಾರೆಂಟಿಯನ್ನು ನೀಡಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ವಂಡರ್‌ಲಾ ಲಾಭ ಹೆಚ್ಚಳ

ವಂಡರ್‌ಲಾ ಹಾಲಿಡೇಸ್ ಲಿಮಿಟೆಡ್ ಕಂಪನಿಯ ನಿವ್ವಳ ಲಾಭವು ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇ 27ರಷ್ಟು ಹೆಚ್ಚಾಗಿದ್ದು, ₹ 42 ಕೋಟಿಗೆ ತಲುಪಿದೆ.

ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ₹ 32.97 ಕೋಟಿ ನಿವ್ವಳ ಲಾಭ ಗಳಿಸಿತ್ತು.ಸರಾಸರಿ ವರಮಾನ
₹ 106 ಕೋಟಿಯಿಂದ ₹ 121 ಕೋಟಿಗೆ ಶೇ 14ರಷ್ಟು ಏರಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.