‘ಬಿಎಸ್‌ಎನ್‌ಎಲ್ ಸಿಬ್ಬಂದಿ ಕಡಿತ ಇಲ್ಲ’

ನವದೆಹಲಿ (ಪಿಟಿಐ): ‘ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ ನಿಯಮಿತದಲ್ಲಿ (ಬಿಎಸ್‌ಎನ್‌ಎಲ್) ಇರುವ 54 ಸಾವಿರ ಸಿಬ್ಬಂದಿಯನ್ನು ಕಡಿತ ಮಾಡುವ ಯಾವುದೇ ಪ್ರಸ್ತಾವಕ್ಕೂ ಅನುಮತಿ ನೀಡಿಲ್ಲ’ ಎಂದು ದೂರಸಂಪರ್ಕ ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.
‘ಸಿಬ್ಬಂದಿ ಕಡಿತ ಮಾಡುವ ಪ್ರಸ್ತಾವಕ್ಕೆ ಅನುಮೋದನ ನೀಡಲಾಗಿಲ್ಲ ಎಂದು ಬಿಎಸ್‌ಎನ್‌ಎಲ್‌ಗೆ ತಿಳಿಸಲಾಗಿದೆ’ ಎಂದು ರಾಜ್ಯಸಭೆಗೆ ಲಿಖಿತ ರೂಪದ ಉತ್ತರ ನೀಡಿದ್ದಾರೆ.
45,597 ಕಾರ್ಯನಿರ್ವಾಹಕ ಮತ್ತು 1,17,305 ಕಾರ್ಯನಿರ್ವಾಹಕೇತರರನ್ನೂ ಒಳಗೊಂಡು ಒಟ್ಟಾರೆ 1,63,902 ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ.
ಸ್ವತ್ತುಗಳನ್ನು ನಗದೀಕರಣಗೊಳಿಸಲು ಮತ್ತು ಗುಜರಾತ್ ಮಾದರಿಯಂತೆ ಕೆಲವು ಸಿಬ್ಬಂದಿಗೆ ಸ್ವಯಂ ನಿವೃತ್ತಿ ಯೋಜನೆ ರೂಪಿಸಲು ಬಿಎಸ್‌ಎನ್‌ಎಲ್ ಮತ್ತು ಎಂಟಿಎನ್‌ಎಲ್ ಸಂಸ್ಥೆಗಳು ಸರ್ಕಾರದ ಅನುಮತಿ ಕೇಳಿದ್ದವು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.