ಬುಧವಾರ, ಸೆಪ್ಟೆಂಬರ್ 29, 2021
19 °C

ಹೊಸ ಪ್ರಿಪೇಯ್ಡ್ ಪ್ಲ್ಯಾನ್ ಪರಿಚಯಿಸಿದ ಬಿಎಸ್‌ಎನ್‌ಎಲ್: ದಿನಕ್ಕೆ 5GB ಡೇಟಾ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

DH File

ಬೆಂಗಳೂರು: ಬಿಎಸ್‌ಎನ್‌ಎಲ್ ದೇಶದಲ್ಲಿ ನೂತನ ಪ್ರಿಪೇಯ್ಡ್ ಪ್ಲ್ಯಾನ್‌ ಪರಿಚಯಿಸಿದೆ. ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಬಿಎಸ್‌ಎನ್‌ಎಲ್ ₹599 ಮೌಲ್ಯದ ಪ್ಲ್ಯಾನ್ ಬಿಡುಗಡೆ ಮಾಡಿದೆ.

ಜುಲೈ 21ರಿಂದ ಬಳಕೆದಾರರಿಗೆ ಹೊಸ ರಿಚಾರ್ಜ್ ಪ್ಲ್ಯಾನ್ ಲಭ್ಯವಾಗಲಿದೆ.

ಏನಿದೆ ಹೊಸ ಪ್ಲ್ಯಾನ್‌ನಲ್ಲಿ?

ಬಿಎಸ್‌ಎನ್‌ಎಲ್ ನೂತನ ₹599ರ ಪ್ಲ್ಯಾನ್ ಗ್ರಾಹಕರಿಗೆ ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಉಚಿತ ಕರೆ ಸೌಲಭ್ಯ ದೊರೆಯಲಿದೆ.

ಅಲ್ಲದೆ, ಬಿಎಸ್‌ಎನ್‌ಎಲ್ ಟ್ಯೂನ್ಸ್ ಉಚಿತ ಚಂದಾದಾರತ್ವ, ಝಿಂಗ್ ಮ್ಯೂಸಿಕ್ ಅಪ್ಲಿಕೇಶನ್‌ಗೆ ಉಚಿತ ಚಂದಾ, ದಿನಕ್ಕೆ 100 ಎಸ್‌ಎಂಎಸ್ ಕೂಡ ದೊರೆಯಲಿದೆ. ಜತೆಗೆ ದಿನಕ್ಕೆ 5GB ಡೇಟಾ ಹಾಗೂ 84 ದಿನಗಳ ವ್ಯಾಲಿಡಿಟಿ ಕೂಡ ಲಭ್ಯವಾಗಲಿದೆ.

ಅದರೊಂದಿಗೆ, ರಾತ್ರಿ ಅನಿಯಮಿತ ಡೇಟಾ ಗ್ರಾಹಕರಿಗೆ ದೊರೆಯಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು