ನವದೆಹಲಿ: ವಾರ್ಷಿಕ ವಹಿವಾಟು ಮೊತ್ತವು ₹ 5 ಕೋಟಿಗಿಂತ ಹೆಚ್ಚು ಇರುವ ಉದ್ಯಮಗಳು ತಮ್ಮ ವಾರ್ಷಿಕ ಜಿಎಸ್ಟಿ ವಿವರಗಳನ್ನು ತಾವೇ ಪ್ರಮಾಣೀಕರಿಸಬಹುದು ಎಂದು ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ನ ಕೇಂದ್ರೀಯ ಮಂಡಳಿಯು (ಸಿಬಿಐಸಿ) ಹೇಳಿದೆ.

ಈ ಜಿಎಸ್ಟಿ ವಿವರಗಳಿಗೆ ಕಂಪನಿಗಳು ಲೆಕ್ಕ ಪರಿಶೋಧಕರಿಂದ ಪ್ರಮಾಣೀಕರಣ ನೀಡಬೇಕಿಲ್ಲ ಎಂದು ಸಿಬಿಐಸಿ ಸ್ಪಷ್ಟಪಡಿಸಿದೆ.

ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವ್ಯವಸ್ಥೆಯ ಅಡಿಯಲ್ಲಿ 2020–21ನೇ ಸಾಲಿಗೆ ₹ 2 ಕೋಟಿಯವರೆಗಿನ ವಾರ್ಷಿಕ ವಹಿವಾಟು ಹೊಂದಿರುವವರನ್ನು ಹೊರತುಪಡಿಸಿ, ಉಳಿದೆಲ್ಲ ಉದ್ಯಮಗಳುವಾರ್ಷಿಕ ರಿಟರ್ನ್ಸ್ ಜಿಎಸ್ಟಿಆರ್–9/9ಎ ಸಲ್ಲಿಸುವುದು ಕಡ್ಡಾಯ.

₹ 5 ಕೋಟಿಗಿಂತ ಅಧಿಕ ವಾರ್ಷಿಕ ವಹಿವಾಟು ನಡೆಸುವವರು ಜಿಎಸ್ಟಿಆರ್–9ಸಿ ಮೂಲಕ ಸಮನ್ವಯ ವರದಿ ಸಲ್ಲಿಸಬೇಕು. ಲೆಕ್ಕ ಪರಿಶೋಧಕರು ಆಡಿಟ್ ಮಾಡಿದ ನಂತರ ಈ ವರದಿಯನ್ನು ಪ್ರಮಾಣೀಕರಿಸಬೇಕಿತ್ತು. ಇದಕ್ಕೆ ಸಂಬಂಧಿಸಿದಂತೆ ‘ಸಿಬಿಐಸಿ’ಯು ಜಿಎಸ್ಟಿ ನಿಯಮದಲ್ಲಿ ತಿದ್ದುಪಡಿ ತಂದಿದ್ದು, ಲೆಕ್ಕ ಪರಿಶೋಧಕರ ನೆರವಿಲ್ಲದ ವಹಿವಾಟುದಾರರು ತಾವೇ ಪ್ರಮಾಣೀಕರಿಸಲು ಅವಕಾಶ ಕಲ್ಪಿಸಿದೆ. ಈ ಕುರಿತು ಭಾನುವಾರ ಅಧಿಸೂಚನೆ ಹೊರಡಿಸಿದೆ.

‘ವಾರ್ಷಿಕ ರಿಟರ್ನ್ಸ್ ಸಲ್ಲಿಸುವಾಗ ಉದ್ದೇಶಪೂರ್ವಕ ಮತ್ತು ಉದ್ದೇಶಪೂರ್ವಕವಲ್ಲದ ತಪ್ಪುಗಳಾದಲ್ಲಿ ಇಲಾಖೆಯ ಪರಿಶೀಲನೆಯ ವೇಳೆ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ’ ಎಂದು ಎಎಂಆರ್ಜಿ ಆ್ಯಂಡ್ ಅಸೋಸಿಯೇಟ್ಸ್ನ ಹಿರಿಯ ಪಾಲುದಾರ ರಜತ್ ಮೋಹನ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.