ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಜು ವರಮಾನ

Last Updated 2 ಜೂನ್ 2019, 18:40 IST
ಅಕ್ಷರ ಗಾತ್ರ

ಬೆಂಗಳೂರು: ಶಿಕ್ಷಣ ತಂತ್ರಜ್ಞಾನ ಸಂಸ್ಥೆ ಬೈಜು, 2018–19ರ ಹಣಕಾಸು ವರ್ಷದಲ್ಲಿ ₹ 1,430 ಕೋಟಿ ವರಮಾನ ಗಳಿಸಿದೆ.

ಈ ವರ್ಷದ ಏಪ್ರಿಲ್‌ನಲ್ಲಿನ ವರಮಾನವು ₹ 200 ಕೋಟಿ ದಾಟಿದೆ. 2019–20ರಲ್ಲಿ ₹ 3,000 ಕೋಟಿ ದಾಟುವ ಅಂದಾಜು ಮಾಡಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

***

‘ಫ್ರೆಷ್‌ಟುಹೋಂನಲ್ಲಿ ₹ 77 ಕೋಟಿ ಹೂಡಿಕೆ

ಬೆಂಗಳೂರು: ತಾಜಾ ಮೀನು ಮತ್ತು ಮಾಂಸ ಮಾರಾಟದ ದೇಶದ ಅತಿದೊಡ್ಡ ಇ–ಕಾಮರ್ಸ್‌ ಸಂಸ್ಥೆಯಾಗಿರುವ ಬೆಂಗಳೂರಿನ ‘ಫ್ರೆಷ್‌ಟುಹೋಂ ಡಾಟ್‌ಕಾಂ’ನ ವಹಿವಾಟು ವಿಸ್ತರಣೆಗೆ ಸಿಇ ವೆಂಚರ್ಸ್‌ ನೇತೃತ್ವದಲ್ಲಿ ವಿವಿಧ ಹೂಡಿಕೆ ಸಂಸ್ಥೆಗಳು ಒಟ್ಟಾರೆ ₹ 77 ಕೋಟಿ ಬಂಡವಾಳ ತೊಡಗಿಸಿವೆ.

ತಾಜಾ ಮತ್ತು ರಾಸಾಯನಿಕಗಳ ಬಳಕೆ ಮುಕ್ತ ಮೀನು ಮತ್ತು ಮಾಂಸವನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ಸಂಸ್ಥೆಯು ಈಗ ದೇಶದ ನಾಲ್ಕು ರಾಜ್ಯಗಳಲ್ಲಿ ವ್ಯಾಪಾರ ನಡೆಸುತ್ತಿದೆ. ‘ಈ ಬಂಡವಾಳವನ್ನು ಪೂರೈಕೆ ಜಾಲ ವಿಸ್ತರಿಸಲು ಮತ್ತು ಪೇಟೆಂಟ್‌ಗೆ ಎದುರು ನೋಡುತ್ತಿರುವ ಸೋರ್ಸಿಂಗ್‌ ತಂತ್ರಜ್ಞಾನದ ಪ್ರಯೋಜನವನ್ನು ಮೀನುಗಾರರಿಗೆ ವಿಸ್ತರಿಸುವ ಕಾರ್ಯಕ್ಕೆ ಬಳಸಲು ಉದ್ದೇಶಿಸಲಾಗಿದೆ’ ಎಂದು ಸಂಸ್ಥೆಯ ಸಿಇಒ ಶಾನ್‌ ಕದಾವಿಲ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT