ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಜುಸ್‌ ತೆಕ್ಕೆಗೆ ಗ್ರೇಟ್‌ ಲರ್ನಿಂಗ್

Last Updated 26 ಜುಲೈ 2021, 14:11 IST
ಅಕ್ಷರ ಗಾತ್ರ

ನವದೆಹಲಿ: ಸಿಂಗಪುರದಲ್ಲಿ ಕೇಂದ್ರ ಕಚೇರಿ ಹೊಂದಿರುವ ‘ಗ್ರೇಟ್‌ ಲರ್ನಿಂಗ್‌’ ಕಂಪನಿಯನ್ನು ₹ 4,466 ಕೋಟಿಗೆ ಸ್ವಾಧೀನಕ್ಕೆ ತೆಗೆದುಕೊಂಡಿರುವುದಾಗಿ ಇ–ಕಲಿಕೆ ಕ್ಷೇತ್ರದ ಬೈಜುಸ್‌ ಕಂಪನಿಯು ಸೋಮವಾರ ತಿಳಿಸಿದೆ.

ಅಲ್ಲದೆ, ಉನ್ನತ ಹಾಗೂ ವೃತ್ತಿಶಿಕ್ಷಣ ವಿಭಾಗದಲ್ಲಿ ತನ್ನ ಸ್ಥಾನ ಗಟ್ಟಿ ಮಾಡಿಕೊಳ್ಳಲು ಹೆಚ್ಚುವರಿಯಾಗಿ ₹2,960 ಕೋಟಿ ಹೂಡಿಕೆ ಮಾಡುವುದಾಗಿಯೂ ತಿಳಿಸಿದೆ.

ಅಮೆರಿಕದ ಡಿಜಿಟಲ್‌ ರೀಡಿಂಗ್ ಪ್ಲಾಟ್‌ಫಾರಂ ಆಗಿರುವ ಎಪಿಕ್‌ ಅನ್ನು ₹ 7,459 ಕೋಟಿಗೆ ಸ್ವಾಧೀನಪಡಿಸಿಕೊಳ್ಳುವುದಾಗಿ ಘೋಷಿಸಿದ ಕೆಲವೇ ದಿನಗಳಲ್ಲಿ ಕಂಪನಿಯು ಮತ್ತೊಂದು ಸ್ವಾಧೀನಕ್ಕೆ ಮುಂದಾಗಿದೆ. ಗ್ರೇಟ್‌ ಲರ್ನಿಂಗ್‌ ಕಂಪನಿಯು ಬೈಜುಸ್‌ ಸಮೂಹದಲ್ಲಿ ಸ್ವತಂತ್ರ ಕಂಪನಿಯಾಗಿಯೇ ಮುಂದುವರಿಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT