ಬೆಂಗಳೂರು: ‘ಕೋವಿಡ್–19’ ಪಿಡುಗಿನಿಂದಾಗಿ ಗ್ರಾಹಕರು ಎದುರಿಸುತ್ತಿರುವ ಹಣಕಾಸು ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಕೆನರಾ ಬ್ಯಾಂಕ್ ವಿಶೇಷ ಚಿನ್ನದ ಸಾಲ ಯೋಜನೆ ಜಾರಿಗೊಳಿಸಿದೆ.

ಚಿನ್ನಾಭರಣ ಅಡಮಾನ ಇರಿಸಿ ಸಾಲ ಪಡೆಯುವ ಈ ಯೋಜನೆಯು ಜೂನ್ 30ರವರೆಗೂ ಜಾರಿಯಲ್ಲಿ ಇರಲಿದೆ. ವಾರ್ಷಿಕ ಶೇ 7.85ರ ಬಡ್ಡಿದರದಲ್ಲಿ ಸಾಲ ಸೌಲಭ್ಯ ಸಿಗಲಿದೆ.

ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳ ಮೇಲಿನ ವೆಚ್ಚ, ಉದ್ದಿಮೆ ವಹಿವಾಟು, ಆರೋಗ್ಯ ತುರ್ತುಪರಿಸ್ಥಿತಿ ಮತ್ತು ವೈಯಕ್ತಿಕ ಉದ್ದೇಶಗಳಿಗಾಗಿ ಈ ಸಾಲ ಬಳಸಬಹುದಾಗಿದೆ. ದೇಶದಾದ್ಯಂತ ಇರುವ ಬ್ಯಾಂಕ್ನ ಎಲ್ಲಾ ಶಾಖೆಗಳಲ್ಲಿಯೂ ಈ ಸೌಲಭ್ಯ ಲಭ್ಯವಿದೆ ಎಂದು ಬ್ಯಾಂಕ್ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಮುಖ ಅಂಶಗಳು

ಚಿನ್ನಾಭರಣ ಅಡಮಾನ ಇರಿಸಿ ಸಾಲ

ಸಾಲ ಮರುಪಾವತಿ ಅವಧಿ 1–3 ವರ್ಷ

ಅನುಕೂಲಕರ ಮರುಪಾವತಿ ಆಯ್ಕೆ

ಗರಿಷ್ಠ ₹ 10 ಲಕ್;ಬೆಳೆ ಸಾಗುವಳಿ ವೆಚ್ಚಕ್ಕೆ

ಗರಿಷ್ಟ ₹ 29 ಲಕ್ಷ; ಕೃಷಿ ಚಟುವಟಿಕೆಗಳಿಗೆ

7.85 % ; ವಾರ್ಷಿಕ ಬಡ್ಡಿ ದರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.