ಶುಕ್ರವಾರ, ಅಕ್ಟೋಬರ್ 7, 2022
24 °C

ಕೆನರಾ ಎಐ1 ಆ್ಯಪ್‌ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೆನರಾ ಬ್ಯಾಂಕ್‌ ತನ್ನ ಗ್ರಾಹಕರಿಗಾಗಿ ‘ಕೆನರಾ ಎಐ1’ ಹೆಸರಿನ ಸೂಪರ್‌ ಆ್ಯಪ್ ಬಿಡುಗಡೆ ಮಾಡಿದೆ. ಗ್ರಾಹಕರ ಅಗತ್ಯಗಳನ್ನು ಪೂರೈಸುವ 250ಕ್ಕೂ ಹೆಚ್ಚಿನ ಸೌಲಭ್ಯಗಳು ಇದರಲ್ಲಿ ಇವೆ.

ಬ್ಯಾಂಕ್‌ನ ಬೇರೆ ಬೇರೆ ಸೇವೆಗಳನ್ನು ಪಡೆಯಲು ಒಂದಕ್ಕಿಂತ ಹೆಚ್ಚಿನ ಆ್ಯಪ್ ಬಳಸುವ ಅಗತ್ಯ ಇರುವುದಿಲ್ಲ ಎಂದು ಬ್ಯಾಂಕ್ ತಿಳಿಸಿದೆ. ಕೆನರಾ ಬ್ಯಾಂಕ್‌ ವ್ಯವಸ್ಥಾಪಕ ನಿರ್ದೇಶಕ ಎಲ್.ವಿ. ಪ್ರಭಾಕರ ಅವರು ಆ್ಯಪ್‌ಗೆ ಶುಕ್ರವಾರ ಚಾಲನೆ ನೀಡಿದರು.

ಆ್ಯಪ್‌ನ ಡ್ಯಾಶ್‌ಬೋರ್ಡ್‌ ಅನ್ನು ಬಳಕೆದಾರರು ತಮ್ಮ ಅಗತ್ಯಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳಲು ಅವಕಾಶವಿದೆ. ಹನ್ನೊಂದು ಭಾಷೆಗಳಲ್ಲಿ ಇದು ಸೇವೆ ಒದಗಿಸುತ್ತದೆ. ಬಿಲ್ ಪಾವತಿ, ವಿಮಾನ ಟಿಕೆಟ್ ಕಾಯ್ದಿರಿಸುವುದು, ಹೋಟೆಲ್ ಅಥವಾ ಕ್ಯಾಬ್ ಬುಕಿಂಗ್, ಸಾಲ ಮರುಪಾವತಿ, ಠೇವಣಿ ಇರಿಸುವುದು, ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಸೇರಿದಂತೆ ಹಲವು ಸೌಲಭ್ಯಗಳನ್ನು ಆ್ಯಪ್ ಮೂಲಕ ಪಡೆಯಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು