ಭಾನುವಾರ, ಜೂನ್ 7, 2020
22 °C

ಗ್ರಾಹಕರಿಗೆ ಕೆನರಾ ಬ್ಯಾಂಕ್‌ ಸಾಲ ಸೌಲಭ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್‌–19ಯಿಂದ ಸಮಸ್ಯೆಗೆ ಒಳಗಾಗಿರುವ ತನ್ನೆಲ್ಲಾ ಗ್ರಾಹಕರಿಗೂ ಅಗತ್ಯವಾದ ಸಾಲದ ನೆರವು ನೀಡುವುದಾಗಿ ಕೆನರಾ ಬ್ಯಾಂಕ್‌ ಘೋಷಿಸಿದೆ.

ವೇತನ, ವಿದ್ಯುತ್‌ ಬಿಲ್‌, ಬಾಡಿಗೆ ಹೀಗೆ ಇನ್ನಿತರ ಅಗತ್ಯಗಳಿಗೆ ಸಂಬಂಧಿಸಿದಂತೆ ಹಣ ಪಾವತಿಸಲು ಸುಲಭ ಮತ್ತು ತ್ವರಿತವಾದ ಸಾಲ ಸೌಲಭ್ಯ ನೀಡುವುದಾಗಿ ತಿಳಿಸಿದೆ.

ಕೃಷಿ, ಸ್ವ ಸಹಾಯ ಗುಂಪುಗಳು ಮತ್ತು ರಿಟೇಲ್‌ ವಲಯಗಳಲ್ಲಿ ಹೀಗೆ ಇದುವರೆಗೆ ₹4,300 ಕೋಟಿ ಮೊತ್ತದ ಆರು ಲಕ್ಷ ಸಾಲ ವಿತರಣೆ ಮಾಡಲಾಗಿದೆ. 

ಅರ್ಹ ಸಾಲದಾತರನ್ನು ಗುರುತಿಸಿ, ಸಾಲ ನೀಡಲು ಎಸ್‌‌ಎಂಎಸ್‌, ಕಾಲ್‌ ಸೆಂಟರ್‌, ಇ–ಮೇಲ್‌ ಮತ್ತು ವೈಯಕ್ತಿಕ ಕರೆಯ ಮಾರ್ಗಗಳನ್ನು ಅನುಸರಿಸಲಾಗುತ್ತಿದೆ.

2020ರ ಮಾರ್ಚ್‌ನಿಂದ ಇಲ್ಲಿಯವರೆಗೆ ಕಾರ್ಪೊರೇಟ್ ಮತ್ತು ಎಂಎಸ್‌ಎಂಇ‌ ವಲಯಗಳಿಗೆ ₹ 60 ಸಾವಿರ ಕೋಟಿಗೂ ಅಧಿಕ ಮುಂಗಡ ಸಾಲ ನೀಡಲಾಗಿದೆ.

‘ಲಾಕ್‌ಡೌನ್‌ನಿಂದ ಸಂಪೂರ್ಣವಾಗಿ ವಿನಾಯಿತಿ ದೊರೆತ ಬಳಿಕ ನಮ್ಮ ಗ್ರಾಹಕರಿಗೆ ಬ್ಯಾಂಕಿನ ಎಲ್ಲಾ ಸೌಲಭ್ಯಗಳೂ ಲಭ್ಯವಾಗಲಿದ್ದು, ಅವರ ವಹಿವಾಟು ಸುಧಾರಣೆಗೆ ಅನುಕೂಲವಾಗಲಿದೆ ಎಂದು ಬ್ಯಾಂಕ್‌ನ ಸಿಇಒ ಎಲ್‌.ವಿ. ಪ್ರಭಾಕರ್‌ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು