ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆನರಾ ಬ್ಯಾಂಕ್‌: ₹ 347 ಕೋಟಿ ನಿವ್ವಳ ಲಾಭ

ಗಮನಾರ್ಹವಾಗಿ ತಗ್ಗಿದ ನಷ್ಟದ ಪ್ರಮಾಣ
Last Updated 10 ಮೇ 2019, 18:04 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್‌ನ 2018–19ನೆ ಹಣಕಾಸು ವರ್ಷದ ನಾಲ್ಕನೆ ತ್ರೈಮಾಸಿಕದಲ್ಲಿನ ನಿವ್ವಳ ನಷ್ಟದ ಪ್ರಮಾಣವು ಗಮನಾರ್ಹವಾಗಿ ಕಡಿಮೆಯಾಗಿದೆ.

‘ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿನ ₹ 4,859 ಕೋಟಿ ನಷ್ಟಕ್ಕೆ ಹೋಲಿಸಿದರೆ ಈ ಬಾರಿಯ ನಷ್ಟದ ಪ್ರಮಾಣ ₹ 551 ಕೋಟಿಗಳಷ್ಟಾಗಿದೆ.ವಸೂಲಾಗದ ಸಾಲಗಳಿಗೆ ಕಡಿಮೆ ಮೊತ್ತವನ್ನು ತೆಗೆದು ಇರಿಸಿರುವುದರಿಂದ ನಷ್ಟದ ಪ್ರಮಾಣ ಕಡಿಮೆಯಾಗಿದೆ’ ಎಂದು ಬ್ಯಾಂಕ್‌ನ ಸಿಇಒ ಆರ್‌. ಎ. ಶಂಕರ ನಾರಾಯಣನ್‌ ಅವರು ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಿವ್ವಳ ಲಾಭ: ಒಟ್ಟಾರೆ ಹಣಕಾಸು ವರ್ಷದಲ್ಲಿ ಬ್ಯಾಂಕ್‌ ₹ 347 ಕೋಟಿ ಗಳಷ್ಟು ನಿವ್ವಳ ಲಾಭ ಗಳಿಸಿದೆ.

ಮಾರ್ಚ್‌ ತ್ರೈಮಾಸಿಕದಲ್ಲಿನ ಬ್ಯಾಂಕ್‌ನ ವರಮಾನವು ₹ 14 ಸಾವಿರ ಕೋಟಿಗಳಷ್ಟಾಗಿದೆ. ವರ್ಷದ ಹಿಂದೆ ಇದು ₹ 11,555 ಕೋಟಿಗಳಷ್ಟಿತ್ತು. ಹಣಕಾಸು ವರ್ಷದಲ್ಲಿನ ಒಟ್ಟಾರೆ ವರಮಾನವು ವರ್ಷದ ಹಿಂದಿನ ₹ 48,195 ಕೋಟಿಗೆ ಹೋಲಿಸಿದರೆ ₹ 53,385 ಕೋಟಿಗಳಷ್ಟಾಗಿದೆ.ಒಟ್ಟು ವಸೂಲಾಗದ ಸಾಲದ ಪ್ರಮಾಣ (ಎನ್‌ಪಿಎ) ವರ್ಷದ ಹಿಂದಿನ ಶೇ 11.84ಕ್ಕೆ ಹೋಲಿಸಿದರೆ ಶೇ 8.83ಕ್ಕೆ ಇಳಿದಿದೆ. ನಿವ್ವಳ ಎನ್‌ಪಿಎ ಶೇ 7.48ದಿಂದ ಶೇ 5.37ಕ್ಕೆ ತಗ್ಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT