ನವದೆಹಲಿ: ಮಂಜೂರಾದ ಕಾರು ಸಾಲ ರದ್ದುಪಡಿಸುವಂತೆ ಕೋರಿ ಬ್ಯಾಂಕುಗಳಿಗೆ ಕೋರಿಕೆ ಬರುತ್ತಿದೆ! ಜಿಎಸ್ಟಿ ದರವನ್ನು ಪರಿಷ್ಕರಿಸುವ ತೀರ್ಮಾನವನ್ನು ಜಿಎಸ್ಟಿ ಮಂಡಳಿಯು ತೆಗೆದುಕೊಂಡಿರುವ ಕಾರಣಕ್ಕೆ, ಪರಿಷ್ಕೃತ ತೆರಿಗೆ ದರ ಜಾರಿಗೆ ಬಂದ ನಂತರವೇ ಕಾರು ಖರೀದಿಸಲು ಜನ ತೀರ್ಮಾನಿಸಿರುವಂತಿದೆ.

ಕಾರುಗಳ ಮೇಲಿನ ತೆರಿಗೆ ಪ್ರಮಾಣವು ಶೇ 28ರಷ್ಟು ಇರುವುದು ಪರಿಷ್ಕೃತ ಜಿಎಸ್ಟಿ ದರ ಸೆಪ್ಟೆಂಬರ್ 22ರಿಂದ ಜಾರಿಗೆ ಬಂದ ನಂತರದಲ್ಲಿ ಶೇ 18ಕ್ಕೆ ತಗ್ಗಲಿದೆ. ಇದು 1,200 ಸಿ.ಸಿ.ವರೆಗಿನ ಎಂಜಿನ್ ಸಾಮರ್ಥ್ಯದ ಕಾರುಗಳಿಗೆ ಅನ್ವಯ ಆಗುತ್ತದೆ.

ಕಾರು ಸಾಲ ಮಂಜೂರಾಗಿರುವ ಹಲವು ಗ್ರಾಹಕರು ತಮ್ಮ ಬ್ಯಾಂಕ್ ಶಾಖೆಗಳನ್ನು ಸಂಪರ್ಕಿಸುತ್ತಿದ್ದು, ಜಿಎಸ್ಟಿ ದರ ಪರಿಷ್ಕರಣೆ ಜಾರಿಗೆ ಬಂದ ನಂತರದಲ್ಲಿ ಕಾರು ಖರೀದಿ ಮಾಡುವುದಾಗಿ, ಈಗ ಮಂಜೂರಾಗಿರುವ ಸಾಲವನ್ನು ರದ್ದುಪಡಿಸಬೇಕು ಎಂಬುದಾಗಿ ಹೇಳುತ್ತಿದ್ದಾರೆ.

ಜಿಎಸ್ಟಿ ದರ ಇಳಿಕೆಯ ನಂತರ ಸಿಗುವ ಪ್ರಯೋಜನವು, ಮಂಜೂರಾಗಿರುವ ಸಾಲವನ್ನು ರದ್ದು ಮಾಡಿಸಿಕೊಳ್ಳಲು ನೀಡಬೇಕಿರುವ ಶುಲ್ಕಕ್ಕಿಂತ ಹೆಚ್ಚಾಗಿರುವ ಕಾರಣಕ್ಕೆ ಗ್ರಾಹಕರು ಈ ಕೋರಿಕೆಯನ್ನು ಬ್ಯಾಂಕುಗಳ ಮುಂದೆ ಇರಿಸುತ್ತಿದ್ದಾರೆ ಎಂದು ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಅಧಿಕಾರಿಯೊಬ್ಬರು ತಿಳಿಸಿದರು.

ಹಲವು ಬ್ಯಾಂಕುಗಳು ಮುಂಗಾರಿನ ಸಂದರ್ಭದಲ್ಲಿ ವಾಹನ ಸಾಲದ ಮೇಲಿನ ಕೆಲವು ಶುಲ್ಕಗಳನ್ನು ಮನ್ನಾ ಮಾಡಿವೆ.

ಕಾರು ಮಾರಾಟ ಮಾಡುವವರು ಇನ್ವಾಯ್ಸ್ ನೀಡಿ ಆಗಿದ್ದಲ್ಲಿ, ಹಳೆಯ ಜಿಎಸ್ಟಿ ದರವೇ ಅನ್ವಯ ಆಗುತ್ತದೆ ಎಂದು ಪರೋಕ್ಷ ತೆರಿಗೆಗಳು ಹಾಗೂ ಸುಂಕಗಳ ಕೇಂದ್ರೀಯ ಮಂಡಳಿಯ (ಸಿಬಿಐಸಿ) ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಾರು ಡೀಲರ್ಗಳು ಇನ್ವಾಯ್ಸ್ ನೀಡಿಲ್ಲದಿದ್ದರೆ ಗ್ರಾಹಕರು ಪರಿಷ್ಕೃತ ಜಿಎಸ್ಟಿ ದರದ ಪ್ರಯೋಜನ ಪಡೆಯಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.