ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಪಿಐ ಮೂಲಕ ನಗದು ಠೇವಣಿ ಸೌಲಭ್ಯ ಶೀಘ್ರ 

Published 5 ಏಪ್ರಿಲ್ 2024, 15:28 IST
Last Updated 5 ಏಪ್ರಿಲ್ 2024, 15:28 IST
ಅಕ್ಷರ ಗಾತ್ರ

ನವದೆಹಲಿ: ಎಟಿಎಂ ಕೇಂದ್ರಗಳಲ್ಲಿ ಯುಪಿಐ ಆಧಾರಿತ ನಗದು ಠೇವಣಿ ಸೌಲಭ್ಯವನ್ನು ಜಾರಿಗೊಳಿಸಲು ಭಾರತೀಯ ರಿಸರ್ವ್‌ ಬ್ಯಾಂಕ್‌ ನಿರ್ಧರಿಸಿದೆ.

ಬಿಲ್ ಪಾವತಿ, ವ್ಯಾಪಾರ ವಹಿವಾಟು ಮತ್ತು ಇತರೆ ಡಿಜಿಟಲ್ ಪಾವತಿಗಳಿಗೆ ಸದ್ಯ ಯುಪಿಐ ಬಳಸಲಾಗುತ್ತಿದೆ. ಇನ್ನು ಮುಂದೆ ಇದರ ಮೂಲಕ ಬ್ಯಾಂಕ್‌ಗಳಿಗೆ ನಗದು ಠೇವಣಿ ಮಾಡುವ ವ್ಯವಸ್ಥೆಗೆ ಶೀಘ್ರವೇ ಚಾಲನೆ ನೀಡಲಾಗುವುದು ಎಂದು ಶಕ್ತಿಕಾಂತ ದಾಸ್‌ ತಿಳಿಸಿದ್ದಾರೆ.

ಪ್ರಸ್ತುತ ಎಟಿಎಂ ಯಂತ್ರಗಳ ಮೂಲಕ ಡೆಬಿಟ್‌ ಕಾರ್ಡ್‌ ಬಳಸಿ ನಗದು ಠೇವಣಿ ಮಾಡಲಾಗುತ್ತಿದೆ. ಈ ವೇಳೆ ಗ್ರಾಹಕರು ಬ್ಯಾಂಕ್‌ ಖಾತೆಯ ಸಂಖ್ಯೆಯನ್ನು ನಮೂದಿಸಬೇಕಿದೆ. ಈ ಹೊಸ ವ್ಯವಸ್ಥೆಯಿಂದ ಗ್ರಾಹಕರಿಗೆ ಅನುಕೂಲವಾಗಲಿದೆ. ಜೊತೆಗೆ, ಬ್ಯಾಂಕ್‌ಗಳ ಕರೆನ್ಸಿ ನಿರ್ವಹಣಾ ಪ್ರಕ್ರಿಯೆಯು ಸುಗಮವಾಗಲಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT