ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲು ಟಿಕೆಟ್‌ ಶುಲ್ಕ ಪಾವತಿಸಲು ಇಎಂಐ ಸೌಲಭ್ಯ!

Last Updated 18 ಅಕ್ಟೋಬರ್ 2022, 19:30 IST
ಅಕ್ಷರ ಗಾತ್ರ

ಬೆಂಗಳೂರು: ಐಆರ್‌ಸಿಟಿಸಿ ಕಂಪನಿಯ ಆ್ಯಪ್‌ (ಐಆರ್‌ಸಿಟಿಸಿ ರೈಲ್ ಕನೆಕ್ಟ್) ಮೂಲಕ ಟಿಕೆಟ್ ಕಾಯ್ದಿರಿಸಿಕೊಳ್ಳುವವರಿಗೆ, ಟಿಕೆಟ್ ದರವನ್ನು ತಕ್ಷಣಕ್ಕೆ ಪಾವತಿಸದೆ ಇರುವ ಸೌಲಭ್ಯ ಕೂಡ ಇನ್ನು ಸಿಗಲಿದೆ!

ಹಣಕಾಸು ಸೇವೆ ಒದಗಿಸುವ ಕ್ಯಾಷ್‌ಇ ಕಂಪನಿಯು ಐಆರ್‌ಸಿಟಿಸಿ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಟಿಕೆಟ್ ಶುಲ್ಕವನ್ನು ಮುಂದೊಂದು ದಿನ ಪಾವತಿಸುವ ಅವಕಾಶವನ್ನು ನೀಡಲಿದೆ (ಟ್ರಾವೆಲ್ ನೌ, ಪೇ ಲೇಟರ್ ಸೌಲಭ್ಯ).

ಇದರಿಂದಾಗಿ, ರೈಲು ಪ್ರಯಾಣ ಕೈಗೊಳ್ಳುವವರು ಟಿಕೆಟ್ ಕಾಯ್ದಿರಿಸಿ, ಅದರ ಶುಲ್ಕವನ್ನು ಇಎಂಐ ಮೂಲಕ ಪಾವತಿಸುವ ಅವಕಾಶವನ್ನು ಕೂಡ ಬಳಸಿಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.

ಪ್ರವಾಸದ ಖರ್ಚುಗಳನ್ನು ನಿಭಾಯಿಸಲು ಸಾಲ ಪಡೆಯುವವರು ಹೆಚ್ಚಿರುವ ರಾಜ್ಯಗಳಲ್ಲಿ ಕರ್ನಾಟಕ ಕೂಡ ಒಂದು ಎಂದು ಕ್ಯಾಷ್‌ಇ ಹೇಳಿದೆ. ಐಆರ್‌ಸಿಟಿಸಿ ಆ್ಯಪ್‌ ಮೂಲಕ ಟಿಕೆಟ್ ಕಾಯ್ದಿರಿಸಿ ಶುಲ್ಕ ಪಾವತಿಸುವ ಸಂದರ್ಭದಲ್ಲಿ ಇಎಂಐ ಆಯ್ಕೆ ಮಾಡಿಕೊಳ್ಳುವ ಅವಕಾಶ ಲಭ್ಯವಾಗಲಿದೆ. ಈ ಸೌಲಭ್ಯ ಪಡೆಯಲು ಹೆಚ್ಚುವರಿ ದಾಖಲೆಗಳನ್ನು ಒದಗಿಸುವ ಅಗತ್ಯ ಇಲ್ಲ ಎಂದು ‍ಪ್ರಕಟಣೆ ಹೇಳಿದೆ.

‘ಪ್ರಯಾಣದ ಟಿಕೆಟ್‌ನ ಶುಲ್ಕಗಳನ್ನು ಇಎಂಐ ಮೂಲಕ ಪಾವತಿಸುವ ವಹಿವಾಟು ಭಾರಿ ಪ್ರಮಾಣದಲ್ಲಿ ಬೆಳವಣಿಗೆ ಕಂಡಿದೆ’ ಎಂದು ಕ್ಯಾಷ್‌ಇ ಕಂಪನಿಯ ಅಧ್ಯಕ್ಷ ವಿ. ರಮಣ್ ಕುಮಾರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT