ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಮಾನ ಮಾರಾಟದಲ್ಲಿ ಸರ್ಕಾರಕ್ಕೆ ಮೋಸ: ರೋಲ್ಸ್ ರಾಯ್ಸ್ ವಿರುದ್ಧ ಸಿಬಿಐ ಪ್ರಕರಣ

Published : 29 ಮೇ 2023, 10:28 IST
Last Updated : 29 ಮೇ 2023, 10:28 IST
ಫಾಲೋ ಮಾಡಿ
Comments

ನವದೆಹಲಿ: ಹಾಕ್‌ ಏರ್‌ಕ್ರಾಫ್ಟ್ ಮಾರಾಟ ಸಂಬಂಧ ಸರ್ಕಾರಕ್ಕೆ ವಂಚನೆ ಮಾಡಿದ ಆರೋಪದ ಮೇಲೆ ಪ್ರಖ್ಯಾತ ದುಬಾರಿ ಕಾರು ತಯಾರಕ ಕಂಪನಿ ‘ರೋಲ್ಸ್ ರಾಯ್ಸ್‌ ಇಂಡಿಯಾ‘ ಹಾಗೂ ಇತರರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ.

ರೋಲ್ಸ್ ರಾಯ್ಸ್ ಇಂಡಿಯಾ ಪ್ರೈವೆಟ್‌ ಲಿಮಿಟೆಡ್‌, ನಿರ್ದೇಶಕ ಟಿಮ್‌ ಜೋನಸ್‌, ಖಾಸಗಿ ವ್ಯಕ್ತಿಗಳಾದ ಸುಧೀರ್‌ ಚೌಧರಿ, ಭಾನು ಚೌಧರಿ ಹಾಗೂ ಸರ್ಕಾರಿ ಸೇವೆಯಲ್ಲಿರುವ ಗುರುತಿಸಲಾಗದ ವ್ಯಕ್ತಿಗಳ ಮೇಲೆ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಸಿಬಿಐ ಹೇಳಿದೆ.

ರೋಲ್ಸ್‌ ರಾಯ್ಸ್‌ ಟರ್ಬೊಮೆಕಾ ಸೇರಿ ರೋಲ್ಸ್ ರಾಯ್ಸ್‌ ಪಬ್ಲಿಕ್‌ ಲಿಮಿಟೆಡ್‌ ಕಂ‍ಪನಿ ಬ್ರಿಟನ್‌ನ ಸಹವರ್ತಿ ಕಂಪನಿಗಳು ಹಾಕ್‌ ಏರ್‌ಕ್ರಾಫ್ಟ್‌ ಮಾರಾಟದಲ್ಲಿ ಭಾರತ ಸರ್ಕಾರಕ್ಕೆ ವಂಚಿಸಿದೆ ಎಂದು ದೂರು ದಾಖಲಾಗಿದೆ.

ಸರ್ಕಾರಿ ಸೇವೆಯಲ್ಲಿರುವ ಗುರುತಿಸಲಾಗದ ವ್ಯಕ್ತಿಗಳು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು 24 ಹಾಕ್‌ 115 ಸುಧಾರಿತ ಜೆಟ್‌ ಟ್ರೈನರ್‌ ಖರೀದಿ ಮಾಡುವಲ್ಲಿ ರೋಲ್ಸ್ ರಾಯ್ಸ್‌ಗೆ ನೆರವಾಗಿದ್ದಾರೆ ಎಂದು ಸಿಬಿಐ ಪ್ರಕಟಣೆಯಲ್ಲಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT