ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೂಗಲ್‌ ವಿರುದ್ಧ ತನಿಖೆಗೆ ಸಿಸಿಐ ಆದೇಶ

Last Updated 23 ಜೂನ್ 2021, 16:45 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಸ್ಮಾರ್ಟ್‌ ಟಿ.ವಿ.ಗಳ ಕಾರ್ಯಾಚರಣೆ ವ್ಯವಸ್ಥೆಯ (operating system) ಮಾರುಕಟ್ಟೆಯಲ್ಲಿ ಗೂಗಲ್ ಕಂಪನಿಯು ಸ್ಪರ್ಧಾತ್ಮಕತೆಗೆ ವಿರುದ್ಧವಾದ ರೀತಿಯಲ್ಲಿ ನಡೆದುಕೊಂಡಿದೆ ಎಂಬ ಆರೋಪದ ಬಗ್ಗೆ ವಿಸ್ತೃತ ತನಿಖೆಗೆ ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ) ಆದೇಶಿಸಿದೆ.

ಟಿ.ವಿ. ಆ್ಯಪ್‌ ವಿತರಣೆ ಒಪ್ಪಂದದ (ಟಿಎಡಿಎ) ಅಡಿಯಲ್ಲಿ, ಗೂಗಲ್‌ನ ಎಲ್ಲ ಆ್ಯಪ್‌ಗಳನ್ನು ಮೊದಲೇ ಇನ್‌ಸ್ಟಾಲ್‌ ಮಾಡಿರಬೇಕು ಎಂದು ಹೇಳುವುದು ಟಿ.ವಿ. ತಯಾರಕರ ಮೇಲೆ ನ್ಯಾಯಸಮ್ಮತವಲ್ಲದ ಷರತ್ತುಗಳನ್ನು ಹೇರಿದಂತೆ ಎಂದು ಮೇಲ್ನೋಟಕ್ಕೆ ಅನಿಸುತ್ತದೆ ಎಂದು ಆಯೋಗವು ಹೇಳಿದೆ.

‘ಸ್ಮಾರ್ಟ್‌ ಟಿ.ವಿ.ಗಳಿಗೆ ಸಂಬಂಧಿಸಿದಂತೆ ನಾವು ಪಾಲಿಸುತ್ತಿರುವ ಪ್ರಕ್ರಿಯೆಗಳು ಸಂಬಂಧಪಟ್ಟ ಕಾನೂನುಗಳಿಗೆ ಅನುಗುಣವಾಗಿಯೇ ಇವೆ ಎಂಬ ದೃಢ ವಿಶ್ವಾಸ ನಮ್ಮದು’ ಎಂದು ಗೂಗಲ್‌ನ ವಕ್ತಾರರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT